ಮನೋರಂಜನೆ

ಬಾಲಿವುಡ್ ನಟಿ ಆಲಿಯಾ ಭಟ್ ಬಾಡಿಗಾರ್ಡ್​ ಜೊತೆ ಹೀಗೆ ನಡೆದುಕೊಳ್ಳಬಹುದಾ?!

Pinterest LinkedIn Tumblr


ಬಾಲಿವುಡ್ ಕ್ಯೂಟ್ ಬೆಡಗಿ ನಟಿ ಆಲಿಯಾ ಭಟ್ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇನ್ನೂ ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಆಲಿಯಾ ವಿರುದ್ಧ ಫುಲ್ ಗರಂ ಆಗಿದ್ದು, ಆಲಿಯಾಗೆ ಬುದ್ದಿ ಹೇಳುತ್ತಿದ್ದಾರೆ. ಅಷ್ಟಕ್ಕೂ ಆಲಿಯಾ ಮಾಡಿದ್ದಾದ್ರು ಏನು?

ಹೌದು ಇತ್ತೀಚೆಗಷ್ಟೆ ಐಫಾ ಪ್ರಶಸ್ತಿ ಪ್ರಕಟನೆಗೊಂಡಿದ್ದು ‘ರಾಝಿ’ ಚಿತ್ರಕ್ಕಾಗಿ ಉತ್ತಮ ನಟಿ ಪ್ರಶಸ್ತಿಗೆ ಆಲಿಯಾ ನೇಮಕಗೊಂಡಿದ್ದಾರೆ. ಇದೇ ಖುಷಿಯಲ್ಲಿರುವ ಆಲಿಯಾರ ಒಂದು ಒರಟಾದ ವರ್ತನೆಯ ವಿಡಿಯೋ ಒಂದು ವೈರಲ್ ಆಗಿದ್ದು, ಸದ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ್ದಾರೆ. ಜೊತೆಗೆ ಆಲಿಯಾಗೆ ಸರಿಯಾಗಿ ವರ್ತಿಸುವಂತೆ ಸಲಹೆ ನೀಡುವ ಮೂಲಕ ನೆಟ್ಟಿಗರು ಆಲಿಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರೆಟಿಗಳಿಗೆ ಬಾಡಿಗಾರ್ಡ್​ ಬೆನ್ಗವಲಾಗಿ ಇರುತ್ತಾರೆ. ಹೀಗೆ ಆಲಿಯಾ ಭಟ್​ ತಮ್ಮ ಕಾರಿನಿಂದ ಇಳಿದ ಕೂಡಲೇ ಛಾಯಾಗ್ರಾಹಕರು ಹಾಗೂ ಅವರ ಅಭಿಮಾನಿಗಳು ಅವರನ್ನು ಸುತ್ತುವರಿಯುತ್ತಾರೆ. ಆಗ ಅಲಿಯಾರ ಬಾಡಿಗಾರ್ಡ್​ ಮುಂದೆ ಬಂದು ಅಲ್ಲಿದ್ದವರನ್ನು ಸರಿಸಿ ದಾರಿ ಮಾಡಿಕೊಡಲು ಆರಂಭಿಸುತ್ತಾರೆ. ಆಗ ಇದ್ದಕ್ಕಿದ್ದಂತೆ ಕೋಪಗೊಂಡು ಆಲಿಯಾ ನಿಂತು ನೀವೇ ಮುಂದೆ ಹೋಗಿ ಎಂದು ತಮ್ಮ ಬಾಡಿಗಾಡ್ ಗಳಿಗೆ ಮುಖ ಕಿವುಚಿಕೊಂಡು ಪದೇ ಪದೇ ಹೇಳುತ್ತಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಇಯಾದಲ್ಲಿ ಫುಲ್ ವೈರಲ್ ಆಗಿದ್ದು, ಆಲಿಯಾರ ಈ ವರ್ತನೆಗೆ ರಣ್ ಬೀರ್ ಕಪೂರ್ ರೆ ಕಾರಣ ಎಂದು ಟ್ರೋಲ್ ಮಾಡಲು ಶುರುಮಾಡಿದ್ದಾರೆ.

ಕಳೆದ ಒಂದು ವರ್ಷದಿಂದ ರಣ್ ಬೀರ್ ಮತ್ತು ಆಲಿಯಾ ಇಬ್ಬರು ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ರಣ್ ಬೀರ್ ಕೂಡ ಹೀಗೆ ಅಭಿಮಾನಿಗಳು ಹಾಗೂ ಮಾಧ್ಯಮದವರೊಂದಿಗೆ ಒರಟಾಗಿ ನಡೆದುಕೊಳ್ಳುತ್ತಾರೆ ರಣ್ ಬೀರ್ ಸಹವಾಸವೇ ಆಲಿಯಾ ಹೀಗೆ ವರ್ತಿಸಲು ಕಾರಣ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಇನ್ನೂ ಈ ವಿಡಿಯೋ ನೋಡಿದವರು ಆಲಿಯಾಗೆ ಸರಿಯಾಗಿ ವರ್ತಿಸುವಂತೆ ಪಾಠ ಮಾಡುತ್ತಿದ್ದಾರೆ.

ಸದ್ಯ ಈ ಜೋಡಿ ಒಟ್ಟಾಗಿ ಅಭಿನಯಿಸಿರುವ ‘ಬ್ರಹ್ಮಸ್ತ್ರ’ ಚಿತ್ರ ಮುಂದಿನ ವರ್ಷ ತೆರೆ ಕಾಣಲಿದ್ದು, ಇದೇ ವರ್ಷಾಂತ್ಯದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಎಂಬ ಸುದ್ದಿ ಬಾಲಿವುಡ್ ನಲ್ಲಿದೆ.

Comments are closed.