ಮನೋರಂಜನೆ

ಟಾಲಿವುಡ್ ಅರ್ಜುನ್ ರೌಡಿ ಈಗ ವರ್ಲ್ಡ್​ ಫೇಮಸ್ ಲವರ್

Pinterest LinkedIn Tumblr


ಟಾಲಿವುಡ್ ಹ್ಯಾಂಡ್ ಸಮ್ ನಟ ವಿಜಯ್ ದೇವರುಕೊಂಡ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಬಾಕ್ಸ್ ಆಫಿಸ್ ನನ್ನು ಚಿಂದಿ ಉಡಾಯಿಸಿ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ ನಟ. ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ ಟಾಲಿವುಡ್ ರೌಡಿ ಬಳಿಕ ಗೀತಾಗೋವಿಂದಂ ಚಿತ್ರದಲ್ಲಿ ಕಂಪ್ಲಿಟ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುವ ಮೂಲಕ ಹುಡುಗಿಯರ ಹಾಟ್ ಫೇವರೆಟ್ ಹೀರೋ ಆದರು.ಜೊತೆಗೆ ಈ ಚಿತ್ರದಲ್ಲಿ ನಟಿ ರಶ್ಮಿಕ ಮಂದಣ್ಣ ವಿಜಯ್ ಗೆ ಸಾಥ್ ನೀಡಿದ್ದು, ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಕೂಡ ಮಾಡಿತ್ತು.

ನಂತರ ಮತ್ತೊಮ್ಮೆ ಇದೇ ಜೋಡಿ ಸ್ಕ್ರೀನ್ ಮೇಲೆ ಮೋಡಿ ಮಾಡಲು ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದರು. ಆದರೆ ಚಿತ್ರ ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಆದರೆ ಈ ಚಿತ್ರ ತಕ್ಕ ಮಟ್ಟಕ್ಕೆ ಅಭಿಮಾನಿಗಳ ಮನಸ್ಸು ಗೆದ್ದಿತು. ಸದ್ಯ ಈ ಚಿತ್ರಗಳ ನಂತರ ವಿಜಯ್ ವರ್ಲ್ಡ್​ಗೆ ಫೇಮಸ್​ ಲವರ್ ಆಗಿದ್ದಾರೆ. ಏನಿದು ಅಂತ ಯೋಚಿಸ್ತಿದ್ದೀರಾ ?

ಯಪ್ ಡಿಯರ್ ಕಾಮ್ರೆಡ್ ಚಿತ್ರದ ನಂತರ ಹ್ಯಾಂಡ್ ಸಮ್ ಹೀರೊ ವಿಜಯ್ ದೇವರುಕೊಂಡ ವರ್ಲ್ಡ್ ಫೇಮಸ್​ ಲವರ್ ಆಗಿದ್ದಾರೆ. ಆದರೆ ಇದು ನಿಜ ಜೀವನದಲ್ಲ. ಇದು ಟಾಲಿವುಡ್ ರೌಡಿಯ ಮುಂದಿನ ಚಿತ್ರದ ಶೀರ್ಷಿಕೆ.

ಈ ಹಿಂದೆ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ, ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಪ್ರಾಮಾಣಿಕ ಪ್ರೇಮಿಯಾಗಿದ್ದ ವಿಜಯ್​ ದೇವರಕೊಂಡ ಈಗ #WorldFamousLover ಎಂಬ ಟೈಟಲ್ ನಲ್ಲಿ ಬರುತ್ತಿರುವ ತಮ್ಮ ಮುಂದಿನ ಹೊಸ ಚಿತ್ರದಲ್ಲಿ ನಟಿಸುತ್ತಿರುವುದಾಗಿ ವಿಜಯ್​ ತಮ್ಮ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನೂ ಈ ಚಿತ್ರ ಯೇಟಿವ್​ ಕಮರ್ಷಿಯಲ್ ಬ್ಯಾನರ್​ನಲ್ಲಿ ಸೆಟ್ಟೇರುತ್ತಿದ್ದು, ‘ವರ್ಲ್ಡ್​ ಫೇಮಸ್​ ಲವರ್​’ ಚಿತ್ರಕ್ಕೆ ನಿರ್ದೇಶಕ ಕ್ರಾಂತಿ ಮಾಧವ್​ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಶೇಷವೆಂದರೆ ಚಿತ್ರದಲ್ಲಿ ವಿಜಯ್ ಗೆ ರಾಶಿ ಖನ್ನಾ, ಇಸಾಬೆಲ್ಲಾ, ಐಶ್ವರ್ಯಾ ರಾಜೇಶ್​ ಹಾಗೂ ಕ್ಯಾಥರೀನ್​ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್ ಆಗಿದ್ದು, ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಿದೆ. ಜೊತೆಗೆ ಚಿತ್ರತಂಡ ಸಿನಿಮಾ ಪ್ರಚಾರದ ಕಾರ್ಯವನ್ನೂ ಆರಂಭಿಸಿದೆ. ಅಲ್ಲದೆ ಚಿತ್ರದ ಫಸ್ಟ್​ಲುಕ್ ಇದೇ ತಿಂಗಳ 20ರಂದು ಬಿಡುಗಡೆಯಾಗಲಿದೆ.

Comments are closed.