ಮನೋರಂಜನೆ

ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಕ್ಕೆ ಕೆಜಿಎಫ್ ಸಂಕಲನಕಾರನ ಸಾಥ್!

Pinterest LinkedIn Tumblr


ಒಂದು ಯಶಸ್ವೀ ಸಿನಿಮಾ ಕೇವಲ ಒಂದೆರಡು ವಿಚಾರಗಳಲ್ಲಿ ಸ್ಪೆಷಲ್ ಆಗಿರೋದಿಲ್ಲ. ಎಲ್ಲದರಲ್ಲಿಯೂ ಕ್ರಿಯೇಟಿವಿಟಿ, ಹೊಸಾ ಆಲೋಚನೆಗಳಿಂದ ರೂಪಿಸಿದ ಚಿತ್ರಗಳಷ್ಟೇ ಪುಷ್ಕಳವಾದ ಗೆಲುವು ದಕ್ಕಿಸಿಕೊಳ್ಳುತ್ತವೆ. ಈ ಸೂಕ್ಷ್ಮವನ್ನು ನಿರ್ದೇಶಕ ರಾಮ್ ಜೆ ಚಂದ್ರ ಮೊದಲ ಹೆಜ್ಜೆಯಲ್ಲಿಯೇ ನಿಖರವಾಗಿ ಗ್ರಹಿಸಿದ್ದಾರೆ. ಆದ್ದರಿಂದಲೇ ಎಲ್ಲ ವಿಭಾಗಗಳೂ ಕೂಡಾ ಹೊಸತನದಿಂದ, ವಿಶೇಷತೆಗಳಿಂದ ಲಕಲಕಿಸುವಂತೆಯೇ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರವನ್ನವರು ಕಟ್ಟಿಕೊಟ್ಟಿದ್ದಾರೆ.

ಹಲವಾರು ವರ್ಷಗಳ ಕಾಲ ಫೀಲ್ಡ್ ವರ್ಕ್ ನಡೆಸಿಯೇ ನಿರ್ದೇಶಕರು ಈ ಕಥೆಯನ್ನು ಸಿದ್ಧಪಡಿಸಿದ್ದಾರೆ. ಅದಕ್ಕೆ ತಕ್ಕುದಾದಂಥಾ ತಾರಾಗಣವನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ಅದೇ ರೀತಿ ಪ್ರತಿಭಾವಂತ ತಾಂತ್ರಿಕ ವರ್ಗವನ್ನೂ ತಮ್ಮ ತಂಡಕ್ಕೆ ಜಮೆಯಾಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಂಕಲನ ಕೂಡ ಪ್ರಧಾನ ಆಕರ್ಷಣೆ. ಯಾಕೆಂದರೆ ಇದಕ್ಕೆ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುವವರು ಉಗ್ರಂ ಶ್ರೀಕಾಂತ್. ಶ್ರೀಮುರಳಿ ಅಭಿನಯದ ಉಗ್ರಂ ಚಿತ್ರದ ಮೂಲಕ ಸಂಕಲನಕಾರರಾಗಿ ಗುರುತಿಸಿಕೊಂಡಿದ್ದ ಶ್ರೀಕಾಂತ್ ಕೆಜಿಎಫ್‍ಗೂ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೆಜಿಎಫ್‍ನ ಸಂಕಲನದ ಮೂಲಕ ರಾಷ್ಟ್ರ ಮಟ್ಟದಲ್ಲಿಯೂ ಹೆಸರುವಾಸಿಯಾಗಿರೋ ಶ್ರೀಕಾಂತ್ ತಮ್ಮ ಅನುಭವ, ಕ್ರಿಯಾಶೀಲತೆಗಳನ್ನೆಲ್ಲ ಧಾರೆಯೆರೆದು ಈ ಸಿನಿಮಾದ ಸಂಕಲನವನ್ನು ಮಾಡಿ ಕೊಟ್ಟಿದ್ದಾರೆ. ಅದೆಷ್ಟೋ ವಿಚಾರಗಳಲ್ಲಿ ಹೊಸ ಐಡಿಯಾಗಳ ಮೂಲಕ ನಿರ್ದೇಶಕರ ಕಲ್ಪನೆಗೆ ಬೇರೆಯದ್ದೇ ಮೆರುಗು ಕೊಟ್ಟಿದ್ದಾರೆ. ಇದರಲ್ಲಿ ಸ್ಕ್ರೀನ್ ಪ್ಲೇ ವಿಚಾರದಲ್ಲಿ ರಾಮ್ ಜೆ ಚಂದ್ರ ವಿಭಿನ್ನ ಪ್ರಯೋಗ ಮಾಡಿದ್ದಾರೆ. ಅದಕ್ಕೆ ಸಂಕಲನ ಮತ್ತಷ್ಟು ಮೆರುಗು ತಂದುಕೊಟ್ಟಿದೆಯಂತೆ. ಒಟ್ಟಾರೆಯಾಗಿ ಈ ಎಲ್ಲ ನಿಟ್ಟಿನಿಂದಲೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಭರವಸೆಯ ಚಿತ್ರವಾಗಿ ಹೊರಹೊಮ್ಮುವಂತಿದೆ.

Comments are closed.