ಮನೋರಂಜನೆ

26ನೇ ವಸಂತಕ್ಕೆ ಕಾಲಿಟ್ಟ ನಟಿ ಅಮೂಲ್ಯ

Pinterest LinkedIn Tumblr


ಸ್ಯಾಂಡಲ್​ವುಡ್​ನ ಗೋಲ್ಡನ್ ಕ್ವೀನ್ ಅಮುಲ್ ಬೇಬಿಗೆ ಬರ್ತ್ ಡೇ ಸಂಭ್ರಮ. 26ನೇ ವಸಂತಕ್ಕೆ ಕಾಲಿಟ್ಟಿರೋ ಅಮೂಲ್ಯ, ಚಿತ್ರರಂಗದಿಂದ ದೂರ ಆಗಿ ಎರಡು ವರ್ಷ ಆಗ್ತಿದೆ.

26ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಕ್ವೀನ್

ಪರ್ವ ಮುಖೇನ ಸಿನಿಪರ್ವ ಶುರು ಮಾಡಿದ ಅಮುಲ್ ಬೇಬಿ, ಬಾಲನಟಿಯಾಗಿಯೇ ಹತ್ತಾರು ಸಿನಿಮಾಗಳಲ್ಲಿ ನಟಿಸಿ, ನಂತರ ಸ್ಯಾಂಡಲ್​ವುಡ್ ಅಂಗಳದಲ್ಲಿ ಚೆಲುವಿನ ಚಿತ್ತಾರ ಬಿಡಿಸಿ ಗೋಲ್ಡನ್ ಕ್ವೀನ್ ಆದವರು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳ ಮೂಲಕ, ಕನ್ನಡಿಗರ ಹೃದಯ ಗೆದ್ದ ಈ ಚೆಲುವೆ 2017ರಲ್ಲಿ ಜಗದೀಶ್ ಕೈಹಿಡಿದರು.

ಮಾಸ್ತಿಗುಡಿ ಹಾಗೂ ಮುಗುಳುನಗೆ ಸಿನಿಮಾಗಳೇ ಅಮೂಲ್ಯ ನಟಿಸಿದ ಕೊನೆಯ ಸಿನಿಮಾಗಳು. ವೈಯಕ್ತಿಕ ಜೀವನಕ್ಕೆ ಅಂತ ಒಂದಷ್ಟು ಕಾಲಾವಕಾಶ ನೀಡಿದ್ದ ಅಮೂಲ್ಯ, ಅತ್ತೆ ಮನೆಯಲ್ಲಿ ತುಂಬಾ ಖುಷ್ ಖುಷಿಯಾಗಿ ಜೀವನ ಕಳೆಯುತ್ತಿದ್ದಾರೆ. ಅಂದಹಾಗೆ ಈ ವರ್ಷ ಉದಯ್​ಪುರ ಪ್ರವಾಸದಲ್ಲಿರೋ ಅಮೂಲ್ಯ ಬರ್ತ್ ಡೇ ಆಚರಿಸಿಕೊಳ್ತಿಲ್ಲ. ಹಾಗಾಗಿ ಅಭಿಮಾನಿಗಳಿಗೂ ಮನೆಯ ಬಳಿ ಬಂದು ಕಾಯಬೇಡಿ ಅನ್ನೋ ಸಂದೇಶ ಮೊದಲೇ ನೀಡಿದರು.

ಎರಡು ವರ್ಷದಿಂದ ಬೆಳ್ಳಿತೆರೆಯಲ್ಲಿ ಕಂಡಿಲ್ಲ ಅಮ್ಮು

ಚಿತ್ರರಂಗಕ್ಕೆ ಸಣ್ಣದೊಂದು ಬ್ರೇಕ್​ನ ನಂತರ ವಾಪಸ್ಸಾಗೋ ಮನಸ್ಸು ಮಾಡಿರೋ ಅಮ್ಮು, ಎಲ್ಲಾ ಅಂದುಕೊಂಡಂತಾದರೆ ಮುಂದಿನ ಜನುಮ ದಿನದ ಒಳಗೆ ಮತ್ತೆ ಬಣ್ಣ ಹಚ್ಚಲಿದ್ದಾರೆ.

ಈಗಾಗ್ಲೇ ಹತ್ತಾರು ಸ್ಕ್ರಿಪ್ಟ್​ಗಳನ್ನು ಕೇಳ್ತಿರೋ ಅಮೂಲ್ಯ, ಒಂದೊಳ್ಳೆ ಫ್ಯಾಮಿಲಿ ಎಂಟ್ರಟೈನರ್​ನಿಂದ ಕಂಬ್ಯಾಕ್ ಆಗೋ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಅದೇನೇ ಇರಲಿ, ಅಮೂಲ್ಯ ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ಮಿಂಚಲಿ ಅನ್ನೋದೇ ಅಭಿಮಾನಿಗಳ ಆಶಯ.

Comments are closed.