ಮನೋರಂಜನೆ

‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಒಂದು ಕೋಟಿ ಗೆದ್ದ ಬಿಹಾರ ಮೂಲದ ಸನೋಜ್ ರಾಜ್

Pinterest LinkedIn Tumblr

ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ಟಿವಿ ಕ್ವಿಜ್ ಶೋ ‘ಕೌನ್ ಬನೇಗಾ ಕರೋಡ್‌ಪತಿ’ 11ನೇ ಸೀಸನ್‌ನಲ್ಲಿ ಮೊಟ್ಟ ಮೊದಲ ಸಲ ಸ್ಪರ್ಧಿಯೊಬ್ಬರು 1 ಕೋಟಿ ರೂಪಾಯಿ ಗೆದ್ದಿದ್ದಾರೆ. ಒಂದು ಕೋಟಿ ಬಹುಮಾನದ ಮೊತ್ತ ಗೆದ್ದಿರುವುದು ಬಿಹಾರ ಮೂಲದ ಸನೋಜ್ ರಾಜ್.

ಯುಪಿಎಸ್‍ಸಿ (ಕೇಂದ್ರ ನಾಗರಿಕ ಸೇವಾ ಆಯೋಗ) ಪರೀಕ್ಷೆಯ ಆಕಾಂಕ್ಷಿ ಆಗಿರುವ ಸನೋಜ್ ಒಟ್ಟು 15 ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಒಂದು ಕೋಟಿ ಗೆದ್ದಿದ್ದಾರೆ. ಒಂದು ಕೋಟಿ ಪ್ರಶ್ನೆ ಹೀಗಿತ್ತು, “ಭಾರತದ ಯಾವ ಮುಖ್ಯ ನ್ಯಾಯಾಧೀಶರ (ಸಿಜೆಐ) ತಂದೆ ಭಾರತದ ಮೊದಲ ಮುಖ್ಯಮಂತ್ರಿಯಾಗಿದ್ದರು?”

ಈ ಪ್ರಶ್ನೆಗೆ ಸನೋಜ್ ಕೊನೆಯ ಲೈಫ್ ಲೈನ್ ಬಳಸಿಕೊಂಡು ‘Ask The Expert’ ಮೂಲಕ ಉತ್ತರ ಪಡೆದು ಗೆದ್ದರು. ಕೊನೆಯ ಪ್ರಶ್ನೆಗೆ 7 ಕೋಟಿ ಗೆಲ್ಲುವ ಚಾನ್ಸ್ ಇತ್ತು. ಆದರೆ ಆಟವನ್ನು ಅವರು ಕ್ವಿಟ್ ಮಾಡಿದರು. ಬಿಗ್ ಬಿ ಕೇಳಿದ 16ನೇ ಪ್ರಶ್ನೆ ಹೀಗಿತ್ತು, “”ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್‌ಮನ್ ಅವರ 100ನೇ ಪ್ರಥಮ ದರ್ಜೆ ಶತಕವನ್ನು ತಲುಪಲು ಒಂದೇ ಒಂದು ರನ್ ಪಡೆದ ಭಾರತೀಯ ಬೌಲರ್ ಯಾರು?”.

ಒಂದು ವೇಳೆ ಈ ಪ್ರಶ್ನೆಗೆ ಸನೋಜ್ ಉತ್ತರಿಸಿದ್ದರೆ ₹ 7 ಕೋಟಿ ಗೆಲ್ಲಬಹುದಾಗಿತ್ತು. ಸನೋಜ್ ಅವರ ಅಪ್ರತಿಮ ಜ್ಞಾನಕ್ಕೆ ಬಿಗ್ ಬಿ ಬೆರಗಾದರು. ಸದ್ಯಕ್ಕೆ ದಿಲ್ಲಿಯಲ್ಲಿ ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ ಸನೋಜ್.

“ಇಷ್ಟೆಲ್ಲಾ ಬಹುಮಾನದ ಮೊತ್ತ ಗೆದ್ದಿರುವುದು ನಿಜಕ್ಕೂ ಖುಷಿಯಾಗಿದೆ. ನನ್ನ ಜೀವನದಲ್ಲೇ ಮರೆಯಲಾಗದ ಮೈಲಿಗಲ್ಲು. ಈ ರೀತಿಯ ಇನ್ನಷ್ಟು ಮೈಲುಗಲ್ಲುಗಳನ್ನು ತಲುಪಬೇಕಾಗಿದೆ. ನಿಮ್ಮ ಗುರಿ ಮುಟ್ಟಬೇಕಾದರೆ ಕಠಿಣ ಪರಿಶ್ರಮ, ಉತ್ಸಾಹ ಮತ್ತು ಸಮರ್ಪಣೆ ಮನೋಭಾವದಿಂದ ಮುನ್ನುಗ್ಗಿದರೆ ಆ ಸಾಧನೆ ಹೆಚ್ಚು ಆನಂದದಾಯಕವಾಗಿರುತ್ತದೆ ಎಂದು ನಾನು ನಂಬುತ್ತೇನೆ” ಎಂದಿದ್ದಾರೆ.

Comments are closed.