ಮನೋರಂಜನೆ

ಆಗಸ್ಟ್ 23 ರಂದು ಕೇರಳ ಸೇರಿದಂತೆ ವಿಶ್ವಾದ್ಯಂತ ‘ಯಾನ’ ಮಲಯಾಳಂ ಸಿನೆಮಾ ಬಿಡುಗಡೆ

Pinterest LinkedIn Tumblr

ದುಬೈ: ಕರ್ನಾಟಕ, ಅಮೇರಿಕಾದ ಕ್ಯಾಲಿಫೋರ್ನಿಯಾ, ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಜನರ ಮನಸ್ಸನ್ನು ಗೆದ್ದಿರುವ ‘ಯಾನ’ ಸಿನೆಮಾ ಮಲಯಾಳಂನಲ್ಲಿ ಆಗಸ್ಟ್ 23 ರಂದು ಕೇರಳ ಸೇರಿದಂತೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ನಿರ್ಮಿಸಿರುವ ಯಾನ ಸಿನೆಮಾ ಕನ್ನಡಲ್ಲಿ ಭಾರೀ ಸುದ್ದಿ ಮಾಡಿದ್ದು, ಮಾಧ್ಯಮಗಳ ಮೆಚ್ಚುಗೆಗೂ ಪಾತ್ರವಾಗಿದೆ.

 

 

ಕೇರಳದ ನೂರಾರು ಸಿನೆಮಾ ಮಂದಿರ, ಗಲ್ಫಿನ ಯುಎಇ, ಒಮಾನ್. ಖತಾರ್ ಹಾಗು ವಿಶ್ವದ ವಿವಿಧ ಕಡೆಗಳಲ್ಲಿ ‘ಯಾನ’ ಮಲಯಾಳಂ ಸಿನೆಮಾ ಬಿಡುಗಡೆ ಆಗಲಿದೆ.

ನಟ ಜೈಜಗದೀಶ್‌ ಹಾಗು ವಿಜಯ ಲಕ್ಷ್ಮಿ ಸಿಂಗ್ ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಯಾನ ಸಿನೆಮಾವನ್ನು ಖುದ್ದು ವಿಜಯ ಲಕ್ಷ್ಮಿ ಸಿಂಗ್ ಅವರೇ ಚಿತ್ರ ಕಥೆ ಬರೆದು ನಿರ್ದೇಶಿಸಿದ್ದಾರೆ.

ಹಿರಿಯ ನಟ ಅನಂತ್‌ ನಾಗ್‌ ಮತ್ತು ಸುಹಾಸಿನಿ, ನಾಯಕರಾಗಿ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್‌ ನಟಿಸಿದ್ದು, ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರವಿ ಶಂಕರ್, ಓಂ ಪ್ರಕಾಶ್ ರಾವ್, ರಾಮಕೃಷ್ಣ, ಸುಂದರರಾಜ್, ಗಡ್ದಪ್ಪ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇಂದಿನ ಯುವ ಪೀಳಿಗೆಯಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಒಟ್ಟಿಗೆ ಕೂತು ನೋಡುವಂಥ ಕಥೆಯನ್ನಿಟ್ಟುಕೊಂಡು ನಿರ್ದೇಶಕಿ ವಿಜಯ ಲಕ್ಷ್ಮಿ ಸಿಂಗ್ ಸಿನೆಮಾ ಮಾಡಿದ್ದಾರೆ.

Comments are closed.