ಕುರುಕ್ಷೇತ್ರ ಹೊಸ ಟ್ರೈಲರ್ ನೋಡಿ ಕುಣಿದು ಕುಪ್ಪಳಿಸ್ತಿರೋ ಅಭಿಮಾನಿಗಳಿಗೆ ಕುರುಕ್ಷೇತ್ರದ ಕಲಿಗಳು ಶಾಕಿಂಗ್ ನ್ಯೂಸ್ ಕೊಟ್ಟಂತೆ ಕಾಣ್ತಿದೆ. ಪದೇ ಪದೇ ರಿಲೀಸ್ ಡೇಟ್ ಪೋಸ್ಟ್ಪೋನ್ ಮಾಡಿ ತಾಳ್ಮೆ ಪರೀಕ್ಷಿಸಿರೋ ಚಿತ್ರತಂಡ, ಮತ್ತೆ ಸಿನಿಮಾ ರಿಲೀಸ್ ಮುಂದೂಡೋ ಲೆಕ್ಕಚಾರದಲ್ಲಿದ್ಯಂತೆ ಮುಂದೆ ಓದಿ.
ಕನ್ನಡ ಚಿತ್ರರಂಗದಲ್ಲಿ ಇಷ್ಟು ಬಾರಿ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್ ಮಾಡಿದ, ಶೂಟಿಂಗ್ ಕಂಪ್ಲೀಟ್ ಆದ್ಮೇಲೂ ಇಷ್ಟೊಂದು ಕಾಯಿಸಿದ ಸಿನಿಮಾ ಮತ್ತೊಂದಿಲ್ಲ ಅನ್ಬೋದು. ಆಕಾಶವೇ ತಲೆಮೇಲೆ ಬಿದ್ರೂ, ಆಗಸ್ಟ್ 2ಕ್ಕೆ ಕುರುಕ್ಷೇತ್ರ ಕದನ ಕನ್ಫರ್ಮ್ ಅಂತ ಚಿತ್ರತಂಡ ಸಾರಿ ಸಾರಿ ಹೇಳಿತ್ತು. ಇದೇ ಖುಷಿಯಲ್ಲಿ ಅಭಿಮಾನಿಗಳು ದಿನಕ್ಕೊಂದು ಪೋಸ್ಟರ್ ಬಿಟ್ಟು ಕೌಂಟ್ಡೌನ್ ಸ್ಟಾರ್ಟ್ ಮಾಡಿದ್ರು. ಇನ್ನೇನು ದುರ್ಯೋಧನನ ಆರ್ಭಟಕ್ಕೆ ಒಂದು ವಾರ ಬಾಕಿಯಿದೆ ಅನ್ನೋವಾಗ್ಲೇ ಕುರುಕ್ಷೇತ್ರ ಟೀಂ ಮತ್ತೆ ಅಭಿಮಾನಿಗಳಿಗೆ ಬೇಸರ ತಂದಿದೆ.
ಒಂದ್ಕಡೆ ಕುರುಕ್ಷೇತ್ರ ಕನ್ನಡ ಮತ್ತು ತೆಲಗು ಟ್ರೈಲರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.. ಟ್ರೈಲರ್ ನೋಡಿ ಖುಷಿಯಾಗಿರೋ ಡಿ- ಹಾರ್ಟ್ಸ್ ದುರ್ಯೋಧನನ ಸ್ವಾಗತಕ್ಕೆ ಹಾರ, ಪಟಾಕಿ ರೆಡಿ ಮಾಡ್ಕೊತ್ತಿದ್ದಾರೆ.. ಚಿತ್ರತಂಡ ಕೂಡ ಪರಭಾಷೆಗಳಲ್ಲಿ ಪ್ರಮೋಷನ್ ಶುರು ಮಾಡಿದೆ. ಇಂತಹ ಟೈಮಲ್ಲೇ ಕುರುಕ್ಷೇತ್ರ ಸಿನಿಮಾ ರಿಲೀಸ್ ಮತ್ತೊಂದು ವಾರ ಮುಂದೂಡೋ ಸುದ್ದಿ ಬಂದಿದೆ. ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲೇ ತೆರೆಮೇಲೆ ಕೌರವ – ಪಾಂಡವರ ಯುದ್ಧಕ್ಕೆ ಮುಹೂರ್ತ ಇಡ್ತಿದ್ದಾರೆ.
ಅಂದ ಹಾಗೆ ಈ ಹಿಂದೆ ನಿರ್ಮಾಪಕ ಮುನಿರತ್ನ ಆಗಸ್ಟ್ 9ಕ್ಕೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡೋದಾಗಿ ಹೇಳಿದ್ರು. ಆದ್ರೆ, ತೆಲುಗಿನ ಸಾಹೋ ಚಿತ್ರ ಆಗಸ್ಟ್ 15ಕ್ಕೆ ಬರುತ್ತೆ ಅಂತ, ಕುರುಕ್ಷೇತ್ರ ರಿಲೀಸ್ ಡೇಟ್ ಪ್ರೀಪೋನ್ ಮಾಡಲಾಗಿತ್ತು. ಸಾಹೋ ರೀತಿಯ ದೊಡ್ಡ ಸಿನಿಮಾ ಬಂದ್ರೆ, ಥಿಯೇಟರ್ ಸಮಸ್ಯೆ ಆಗುತ್ತೆ ಅಂತ ಇಂತಾದೊಂದು ನಿರ್ಧಾರಕ್ಕೆ ಚಿತ್ರತಂಡ ಬಂದಿತ್ತು. ಇದೀಗ ಸಾಹೋ ರಿಲೀಸ್ ಎರಡು ವಾರ ಮುಂದಕ್ಕೆ ಹೋಗಿದೆ. ಹಾಗಾಗಿ ಆಗಸ್ಟ್ 9ಕ್ಕೆ ಕುರುಕ್ಷೇತ್ರ ಚಿತ್ರವನ್ನ ತೆರೆಗೆ ತರೋ ಲೆಕ್ಕಾಚಾರ ಶುರುವಾಗಿದೆ.
ಕುರುಕ್ಷೇತ್ರ ಸೆಕೆಂಡ್ ಟ್ರೈಲರ್ ನೋಡಿದ್ಮೇಲೆ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಹಾಗಾಗಿ ಕೊಂಚ ಸಮಯ ತಗೊಂಡು ಮತ್ತಷ್ಟು ಸೊಗಸಾಗಿ ಚಿತ್ರವನ್ನ ಪ್ರೇಕ್ಷಕರ ಮುಂದೆ ತಂದು ಬಾಕ್ಸಾಫೀಸ್ ಕೊಳ್ಳೆ ಹೊಡೆಯೋ ಪ್ಲಾನ್ ಇದು. ಅವ್ರ ಪ್ರಯತ್ನಕ್ಕೆ ಆಲ್ ದಿ ಬೆಸ್ಟ್ ಹೇಳೋಣ.
Comments are closed.