ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ವಿಜೆ ರಮ್ಯಾ ಜೊತೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸಿದ್ದು, ಈಗ ಆ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅದಾಯಿ ಚಿತ್ರದ ಟ್ರೈಲರ್ ನಲ್ಲಿ ಅಮಲಾ ಪೌಲ್ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿ ಅಮಲಾ, ವಿಜೆ ರಮ್ಯಾ ಅವರ ಜೊತೆ ಲಿಪ್‍ಲಾಕ್ ದೃಶ್ಯದಲ್ಲಿ ನಟಿಸಿದ್ದಾರೆ. ಅದಾಯಿ ಚಿತ್ರದ ಟ್ರೈಲರ್ ಅನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಬಿಡುಗಡೆ ಮಾಡಿದ್ದಾರೆ. ಅನುರಾಗ್ ಅವರು ಈ ಟ್ರೈಲರ್ ತಮ್ಮ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ಅದಾಯಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಹೆಮ್ಮೆ ಆಗುತ್ತಿದೆ. ಈ ಸಿನಿಮಾ ನೋಡಲು ನಾನು ಕಾಯುತ್ತಿದ್ದೇನೆ. ಅದಾಯಿ ಚಿತ್ರತಂಡಕ್ಕೆ ಶುಭವಾಗಲಿ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಚಿತ್ರದ ಟೀಸರ್ ಅನ್ನು ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ಬಿಡುಗಡೆ ಮಾಡಿದ್ದರು. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.
ಈ ಚಿತ್ರದಲ್ಲಿ ಅಮಲಾ ಬೋಲ್ಡ್ ಯುವ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ `ಎ’ ಸರ್ಟಿಫಿಕೇಟ್ ದೊರೆತಿದ್ದು, ಚೆನ್ನೈ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿದೆ. ಪ್ರದೀಪ್ ಕುಮಾರ್ ಹಾಗೂ ಬಾಂಡ್ ಓರ್ಕಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
Comments are closed.