ಮನೋರಂಜನೆ

ಅವಕಾಶ ಬೇಕಿದ್ದರೇ ರಾಜಿಯಾಗು ಎಂದಿದ್ದರು!: ನಟಿ ಗಾಯಿತ್ರಿ ಸುರೇಶ್

Pinterest LinkedIn Tumblr


ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳಗಳ ಬಗ್ಗೆ ಹಲವಾರು ನಟಿಯರು ಮೀಟೂ ಆಭಿಯಾನದ ಮೂಲಕ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದೀಗ ಈ ಸಾಲಿಗೆ ಮಲಯಾಳಂ ಚಿತ್ರರಂಗದ ಯುವನಟಿ ಗಾಯಿತ್ರಿ ಸುರೇಶ್ ಹೊಸ ಸೇರ್ಪಡೆಯಾಗಿದ್ದು, ಇಂಡಸ್ಟ್ರಿಯಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಗಾಯತ್ರಿ, ಸಿನಿಮಾರಂಗಕ್ಕೆ ಆಗಷ್ಟೇ ಬಂದಿದ್ದ ಸಮಯ. ಅವಕಾಶಗಳಿಗಾಗಿ ಹುಡುಕುತ್ತಿದ್ದ ನಟಿ ಗಾಯಿತ್ರಿಗೆ ಕೆಲವು ನಿರ್ದೇಶಕ, ನಿರ್ಮಾಪಕರು ರಾಜಿ ಆಗ್ತೀಯಾ ಎಂದು ಬಗೆ ಬಗೆಯ ರೀತಿ ಮೆಸೆಜ್ ಮಾಡಿ ಒತ್ತಾಯ ಮಾಡುತ್ತಿದ್ದರಂತೆ.

ಹೀಗಂತ ಸ್ವತಃ ನಟಿ ಗಾಯಿತ್ರಿ ಸುರೇಶ್ ಹೇಳಿಕೊಂಡಿದ್ದಾರೆ.ಗಾಯಿತ್ರಿ ಸುರೇಶ್ ಅವರಿಗೆ ಮೆಸೆಜ್ ಮಾಡಿ ಕಾಂಪ್ರೊಮೈಸ್ ಆಗು, ಕಮಿಟ್ಮೆಂಟ್ ಗೆ ಒಪ್ಪಿಕೋ ಎಂದು ಮೆಸೆಜ್ ಮಾಡಿದವರು ಯಾರು ಎಂಬುದನ್ನ ಆ ನಟಿ ಬಿಟ್ಟುಕೊಟ್ಟಿಲ್ಲ. ಆದರೆ, ಬಹಳ ಜನ ಇದೇ ರೀತಿ ಅಪ್ರೋಚ್ ಮಾಡಿದ್ದರು ಎಂದಷ್ಟೇ ಹೇಳಿದ್ದಾರೆ.

ಗಾಯಿತ್ರಿ ಸುರೇಶ್ ಮಲಯಾಳಂ ಚಿತ್ರರಂಗದ ನಟಿ. 2014ರಲ್ಲಿ ಮಿಸ್ ಫೆಮಿನಾ ಕೇರಳ ಪ್ರಶಸ್ತಿ ಗೆದ್ದಿದ್ದ ಗಾಯಿತ್ರಿ ಮೂಲತಃ ಮಾಡೆಲ್. 2015ರಲ್ಲಿ ಜಮ್ನ ಪ್ಯಾರಿ ಚಿತ್ರದ ಮೂಲಕ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಪ್ರವೇಶ ಮಾಡಿದ ಗಾಯಿತ್ರಿ ಇಲ್ಲಿಯವರೆಗೂ ಸುಮಾರು 10ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.

Comments are closed.