ಮನೋರಂಜನೆ

ನಾನು ಮದುವೆಯಾಗಿರುವುದೇ ತಪ್ಪಾ? ಟಾಲಿವುಡ್​ ಬೆಡಗಿ

Pinterest LinkedIn Tumblr


ಟಾಲಿವುಡ್ ನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತ ಬಂದಿದ್ದ ಕ್ಯೂಟ್ ಬೆಡಗಿ ಸಮಂತಾ ಇತ್ತೀಚಿಗೆ ಬೇಸರದಲ್ಲಿದ್ದಾರೆ. ಇಷ್ಟಕ್ಕೂ ಸಮಂತಾ ಮುಖದಲ್ಲಿ ಬೇಸರದ ಛಾಯೆ ಮೂಡಿರೋದ್ಯಾಕೆ ಅಂದ್ರಾ ಮತ್ಯಾಕೂ ಅಲ್ಲ ಸಮಂತಾ ಕೈಯಲ್ಲಿಗ ಅವಕಾಶಗಳೇ ಇಲ್ವಂತೆ. ಇದೇ ಕಾರಣಕ್ಕೆ ಸಮಂತಾ ಸಿಡಿಮಿಡಿಗೊಂಡಿದ್ದಾರೆ.

ಹೌದು ಎಲ್ಲಾ ನಟಿಯರು ಮದುವೆಯಾದ ನಂತರ ಮಾರುಕಟ್ಟೆ ಕಳೆದುಕೊಳ್ಳುತ್ತಾರೆ ಎಂಬ ಮಾತಿದೆ. ಆದರೆ ಈಗ ಆ ಟ್ರೆಂಡ್ ಬದಲಾಗುತ್ತಿದ್ದು, ಮದುವೆಯ ನಂತರವೂ ನಟಿಯರು ಸಿನಿ ಸ್ಕ್ರೀನ್ ನಲ್ಲಿ ಮಿಂಚುತ್ತಿದ್ದಾರೆ. ಆದರೆ ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ಪಾಲಿಗೆ ಮಾತ್ರ ಈ ಮಾತು ಅದ್ಯಾಕೋ ಸತ್ಯವಾಗಿಲ್ಲ.

ಹೌದು ಇತ್ತೀಚಿಗೆ ವೈವಾಹಿಕ ಬಂಧನಕ್ಕೆ ಕಾಲಿಟ್ಟ ಸಮಂತಾ, ಮದುವೆಯಾಗಿರುವ ಕಾರಣಕ್ಕೆ ಸಾಕಷ್ಟು ಆಫರ್ ಕಳೆದುಕೊಂಡಿದ್ದಾರಂತೆ. ಈ ವಿಚಾರವನ್ನು ಸ್ವತಃ ಸಮಂತಾ ಹೇಳಿಕೊಂಡಿದ್ದು, ನಾನೇನಾದ್ರೂ ತಪ್ಪು ನಿರ್ಧಾರ ಮಾಡಿದ್ರಾ ಎಂದು ಯೋಚಿಸುತ್ತಿದ್ದಾರಂತೆ.

ನಟಿಯರಾದ ಐಶ್ವರ್ಯಾ ರೈ, ಕರೀನಾ ಕಪೂರ್​ ಸೇರಿ ಸಾಕಷ್ಟು ಹೀರೋಯಿನ್​ಗಳು ಮದುವೆಯಾದ ನಂತರವೂ ಬಣ್ಣ ಹಚ್ಚುತ್ತಿದ್ದಾರೆ. ನಟಿ ಸಮಂತಾ ಕೂಡ ಮದುವೆಯ ನಂತರವೂ ರಂಗಸ್ಥಳಂ, ಕನ್ನಡದ ಯು ಟರ್ನ್​ ಚಿತ್ರದ ತೆಲುಗು ರೀಮೆಕ್ ಯೂ-ಟರ್ನ್​, ಮಜಿಲಿ, ತಮಿಳಿನ ಮರ್ಸಲ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಜೊತೆಗೆ ಸಮಂತಾ ಅಭಿನಯದ ‘ಓಹ್​ ಬೇಬಿ’ ಚಿತ್ರ ಜುಲೈನಲ್ಲಿ ತೆರೆಗೆ ಬರುತ್ತಿದ್ದು, ಸಿನಿಮಾದ ಟ್ರೈಲರ್​ ಸದ್ದು ಮಾಡಿದೆ. ಹೀಗಿದ್ದರೂ ಅವರಿಗೆ ಇತ್ತೀಚೆಗೆ ಸಿನಿಮಾಗಳು ಬರುವುದು​ ಕಡಿಮೆ ಆಗಿದೆಯಂತೆ.

ನಾನು 2017ರಲ್ಲಿ ನಾಗಚೈತನ್ಯ ಅವರನ್ನು ಮದುವೆಯಾದೆ. ಅದಕ್ಕೂ ಮುಂಚೆ ನನಗೆ ಸಾಕಷ್ಟು ಆಫರ್​ಗಳು ಬರುತ್ತಿದ್ದವು. ಅದಕ್ಕೆ ಹೋಲಿಕೆ ಮಾಡಿದರೆ ಆದರೆ ಮದುವೆಯಾದ ನಂತರ ನನ್ನ ಕೈನಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಿನಿಮಾಗಳುಇವೆ. ನಮ್ಮನ್ನು ಸಿನಿಮಾಗಳಿಗೆ ಹಾಕಿಕೊಂಡು ಮಾಡುವುದೇನಿದೆ ಎನ್ನುವುದು ಅವರ ಭಾವನೆ ಇರಬಹುದು, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Comments are closed.