
ಸದಾ ಕಾಂಟ್ರಾವರ್ಸಿಗಳಿಂದಲೇ ಸುದ್ದಿಯಾಗುವ ಕಿರಿಕ್ ಬೆಡಗಿ ಸಂಯುಕ್ತಾ ಬೇಸರವಾದಾಗ ಏನು ಮಾಡ್ತಾರೆ ಗೊತ್ತಾ? ಸಂಯುಕ್ತಾ ಸ್ವತಃ ತಮಗೆ ಬೇಸರವಾದಾಗ ಏನು ಮಾಡ್ತೇನೆ ಅನ್ನೋ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅದೇನು ಅನ್ನೋದನ್ನು ನೀವೆ ಓದಿ.
ಸದಾ ಸುದ್ದಿಯಾಗುವ ಕಿರಿಕ್ ಬೆಡಗಿ ನಟಿ ಸಂಯುಕ್ತಾ ಹೆಗಡೆ ಇದೀಗಾ ಯುರೋಪ್ ಪ್ರವಾಸದಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಈ ಪ್ರವಾಸದಲ್ಲಿ ಮರವೊಂದಕ್ಕೆ ಕಟ್ಟಿರುವ ಜೋಕಾಲಿಯಲ್ಲಿ ಕೂತಿರೋ ಫೋಟೋ ಒಂದನ್ನ ಅಪ್ಲೋಡ್ ಮಾಡಿದ ಸಂಯುಕ್ತಾ ಬಿಕನಿಯಲ್ಲಿ ಜೋಕಾಲಿಯಾಡುತ್ತಿರುವ ಪೋಟೋ ಅಪ್ ಮಾಡಿ ಜೋಕಾಲಿ ನಮ್ಮ ಮನಸ್ಸನ್ನ ತಿಳಿಗೊಳಿಸುತ್ತವೆ. ಕೆಟ್ಟ ಮೂಡನಲ್ಲಿದ್ದಾಗ ನೀವು ಜೋಕಾಲಿ ಆಡಿ, ನೆಮ್ಮದಿಯಿಂದ ತೇಲಾಡಿ ಅಂತಾ ಅಭಿಮಾನಿಗಳಿ ಹೇಳಿದ್ದಾರೆ.
ಹಿಂದಿ ರಿಯಾಲಿಟಿ ಶೋ ಟಿಕೆಟ್ ಪಡೆದ ಮೊದಲ ಕನ್ನಡತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಸಂಯುಕ್ತಾ ಸ್ಯಾಂಡಲ್ವುಡ್ನಲ್ಲಿ ಕಿರಿಕ್ ಪಾರ್ಟಿ ಮತ್ತು ಕಾಲೇಜ್ಕುಮಾರ ಎಂಬ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ವಿಶೇಷವೆಂದರೆ ಕನ್ನಡದ ಬಿಗ್ಬಾಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಕನ್ನಡದ ಕಿರಿಕ್ ಪಾರ್ಟಿ ಚಿತ್ರವು ತೆಲುಗಿನಲ್ಲಿ “ಕಿರ್ರಾಕ್ ಪಾರ್ಟಿ”ಎಂದು ರೀಮೇಕ್ ಆಗಿದ್ದು ಈ ಚಿತ್ರದಲ್ಲಿ ನಟಿಸುವುದರ ಮೂಲಕ ಟಾಲಿವುಡ್ಗೆ ಎಂಟ್ರಿಕೊಟ್ಟ ಸಂಯುಕ್ತಾ ಇದೀಗಾ ಫುಲ್ ಮೋಜು ಮಸ್ತಿಯಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗ್ತಿದೆ.
Comments are closed.