ಮನೋರಂಜನೆ

ಬಾಡಿಗೆ ಮನೆ ವಿವಾದ: ನಟ ಯಶ್ ತಾಯಿ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr


ಬೆಂಗಳೂರು (ಜೂ.9): ಯಶ್​ ಬಾಡಿಗೆ ಮನೆ ವಿವಾದ ಅಂತ್ಯವಾಗುವ ಲಕ್ಷಣ ಕಾಣುತ್ತಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಹಾಳು ಮಾಡಲಾಗಿದೆ ಎಂದು ಯಶ್​ ತಾಯಿ ಹಾಗೂ ಇತರರ ವಿರುದ್ಧ ಮನೆ ಮಾಲೀಕರಾದ ನೊಂದ ವೈದ್ಯ ದಂಪತಿ ದೂರು ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮುನಿಪ್ರಸಾದ್ ಹಾಗೂ ವನಜಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಯಲ್ಲಿರುವ ವಸ್ತುಗಳನ್ನು ಯಶ್​ ಕುಟುಂಬದವರು ಜಖಂ ಮಾಡಿದ್ದಾರೆ ಹಾಗೂ ಕೆಲ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

“ಮನೆ ಖಾಲಿ ಮಾಡುವ ವೇಳೆ ಮನೆಯಲ್ಲಿನ ವಸ್ತುಗಳನ್ನು ಧ್ವಂಸ ಮಾಡಲಾಗಿದೆ. ಕೆಲ ಬಾಗಿಲೇ ನಾಪತ್ತೆ ಆಗಿವೆ. ಮನೆಯಲ್ಲಿದ್ದ ಟ್ಯೂಬ್ ಲೈಟ್‌ಗಳು ಕಾಣುತ್ತಿಲ್ಲ. ಬಾತ್ ರೂಂನ ಕಮೋಡ್​ ಒಡೆದು ಹಾಕಿದ್ದಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುಬೇಕು,” ಎಂದು ದಂಪತಿ ದೂರಿನಲ್ಲಿ ಕೋರಿದ್ದಾರೆ.

2015ರಲ್ಲಿ ಮನೆ ಮಾಲೀಕರಾದ ಡಾ. ಮುನಿಪ್ರಸಾದ್ ಮತ್ತು ವನಜಾ ದಂಪತಿ, ಯಶ್ ಕುಟುಂಬಕ್ಕೆ ಮನೆ ಖಾಲಿ ಮಾಡುವಂತೆ ಸೂಚಿಸಿದ್ದರು. ಆದರೆ ಅದೃಷ್ಟದ ಮನೆ ಬಿಡಲು ಯಶ್ ತಾಯಿ ಪುಷ್ಪಾ ಸಿದ್ಧರಿರಲಿಲ್ಲ. ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಹಗ್ಗಜಗ್ಗಾಟವಾಗಿ, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಅದರಂತೆ ಸಿವಿಲ್ ಕೋರ್ಟ್ ಬಾಕಿ ಇರುವ ಬಾಡಿಗೆ ಹಣ ನೀಡಿ, ಮನೆ ಖಾಲಿ ಮಾಡುವಂತೆ ಸೂಚಿಸಿತ್ತು. ಆದರೆ ಯಶ್ ತಾಯಿ ಗಡುವು ವಿಸ್ತರಿಸುವಂತೆ ಕೇಳಿಕೊಂಡಾಗ ಮೇ 31ರವರೆಗೆ ಸಮಯ ನೀಡಲಾಗಿತ್ತು.

ಯಶ್​ ಮನೆ ಖಾಲಿ ಮಾಡಿದ್ದಾರೆ. ಆದರೆ, ಮನೆ ವಸ್ತುಗಳನ್ನು ಒಡೆದು ಹಾಕಲಾಗಿತ್ತು. ಕತ್ರಿಗುಪ್ಪೆ ಮನೆ ಮಾಲೀಕರಾದ ಡಾ. ಮುನಿಪ್ರಸಾದ್ ಅವರ ಸಂಬಂಧಿ ಡಾ. ಉಪೇಂದ್ರ ಎಂಬುವರಿಗೆ ಯಶ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಖಾಸಗಿ ಹೋಟೆಲ್‍ ಒಂದಕ್ಕೆ ಅವ್ರನ್ನು ಕರೆಸಿಕೊಂಡ ಯಶ್, ಮನೆ ಖಾಲಿ ಮಾಡುತ್ತೇನೆ, ಬಾಕಿ ಹಣವನ್ನೂ ಕಪಡುತ್ತೇನೆ. ಆದರೆ ಕ್ಷಮೆ ಕೋರಿ ಮಾಧ್ಯಮ ಪ್ರಕಟಣೆ ಹೊರಡಿಸಬೇಕು ಎಂದು ಕಳೆದ ಮೇ ತಿಂಗಳಲ್ಲೇ ಬೆದರಿಸಿದ್ದರು ಎನ್ನುವ ಮಾತಿದೆ.

Comments are closed.