ಮನೋರಂಜನೆ

ಬಾಡಿಗೆ ಮನೆ ಸಿಗದೇ ಪರದಾಡಿದ್ದ ನಟಿ ತಾಪ್ಸಿ!

Pinterest LinkedIn Tumblr


ಸೌತ್ ಇಂಡಸ್ಟ್ರಿಯ ಬೋಲ್ಡ್ ಮತ್ತು ಕಾನ್ಫಿಡೆಂಟ್ ನಟಿ ತಾಪ್ಸಿ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿ ಮಿಂಚಿರುವ ತಾಪ್ಸಿ, ಸಧ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಬೇಬಿ, ಪಿಂಕ್, ಬದ್ಲಾ, ನಾಮ್ ಶಬಾನಾ, ಜುಡ್ವ -2 ಅಂತಹ ವಿಭಿನ್ನ ಪಾತ್ರಗಳ ಮೂಲಕ ಬಿಟೌನ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಆದರೆ ಸಿನಿ ಜಗತ್ತಿನಲ್ಲಿ ತಾಪ್ಸಿ ಜರ್ನಿ ಅಷ್ಟೊಂದು ಸುಲಭವಾಗಿರಲಿಲ್ಲ. ಆ ಅನುಭವವನ್ನು ತಾಪ್ಸಿ ಹಂಚಿಕೊಂಡಿದ್ದಾರೆ.

ಸಿನಿಜಗತ್ತಿಗೆ ಎಂಟ್ರಿ ನೀಡುವಾಗ ಬ್ಯಾಗ್ರೌಂಡ್ ನಲ್ಲಿ ಯಾರೂ ಇಲ್ಲದೆ ಒಬ್ಬಂಟಿಯಾಗಿ ಇಂಡಸ್ಟ್ರಿಗೆ ಬಂದ ತಾಪ್ಸಿ ಆರಂಭದಲ್ಲಿ ಬಹಳ ಕಷ್ಟದ ಸಂದರ್ಭಗಳನ್ನ ನೋಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ತಾಪ್ಸಿ ”ಜನರು ನಮ್ಮನ್ನ ನೋಡಲು 500 ರೂಪಾಯಿ ನೀಡಿ ಚಿತ್ರಮಂದಿರಕ್ಕೆ ಬರ್ತಾರೆ, ಕಾರ್ಯಕ್ರಮಗಳಿಗೆ ಬರ್ತಾರೆ. ಆದರೆ ನಾವು ಅವರ ಮಧ್ಯೆ ಜೀವನ ಮಾಡ್ತೀವಿ ಅಂದ್ರೆ ಮಾತ್ರ ಒಪ್ಪುವುದಿಲ್ಲ.
ನಮ್ಮನ್ನು ಸಮಾಜ ನೋಡುವ ದೃಷ್ಠಿಯೇ ಬೇರೆ. ಇದು ಒಮ್ಮೊಮ್ಮೆ ಬೇಸರ ತರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮೂಲತಃ ಉತ್ತರ ಭಾರತದ ಹುಡುಗಿಯಾಗಿದ್ದ ತಾಪ್ಸಿ ಆರಂಭದಲ್ಲಿ ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ನಟಿಸಿದರು. ಆಗ ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲದೆ ಎಲ್ಲವೂ ಸಹ ಕೂಲ್ ಆಗಿಯೇ ಇತ್ತು. ಆದರೆ ಬಾಲಿವುಡ್ ಸಿನಿರಂಗಕ್ಕೆ ಪ್ರವೇಶಿಸುವ ಸಲುವಾಗಿ ಮುಂಬೈಗೆ ಹೋದಾಗ ವಾಸ ಮಾಡಲು ಮನೆ ಬಾಡಿಗೆಗೆ ನೀಡಲಿಲ್ಲ.

”ದೆಹಲಿ ಮತ್ತು ಹೈದ್ರಾಬಾದ್ ಎರಡೂ ಒಂದೇ ರೀತಿ ಸ್ಥಳ ಆದರೆ ಮುಂಬೈ ಆಗಲ್ಲ. ಹೆಚ್ಚು ಜನರು ಇರುವ ಸ್ಥಳ. ನಾನು ಒಂಟಿಯಾಗಿದ್ದ ಕಾರಣ ಯಾರೊಬ್ಬರರು ನನಗೆ ಮನೆ ಬಾಡಿಗೆ ಕೊಡಲಿಲ್ಲ. ಅದರಿಂದು ನನಗೆ ಸ್ವಂತ ಮನೆ ಇದೆ. ಸಹೋದರಿ ಜೊತೆ ನಾನು ವಾಸಮಾಡುತ್ತಿದ್ದು ಖುಷಿಯಾಗಿದ್ದೇನೆ. ನನ್ನ ತಂದೆ-ತಾಯಿ ದೆಹಲಿಯಲ್ಲಿದ್ದಾರೆ” ಎಂದು ತಮ್ಮ ಹಳೆಯ ಕಷ್ಟದ ದಿನಗಳನ್ನು ಮೆಲುಕು ಹಾಕಿದರು. ಸದ್ಯ ತಾಪ್ಸಿ ಅವರು ಹಿಂದಿ ಸಿನಿಮಾ ತಡ್ಕಾ ಸಿನಿಮಾದಲ್ಲಿ ನಟಿಸುತ್ತಿದ್ದು, ಜೊತೆಗೆ ಗೇಮ್ ಓವರ್, ಮಿಷನ್ ಮಂಗಲ್, ಸಾಂದ್ ಕಿ ಆಂಖ್ ಎಂಬ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Comments are closed.