‘ಕಥೆಯೊಂದು ಶುರುವಾಗಿದೆ’ ಸಿನಿಮಾದಿಂದ ಕಂಬ್ಯಾಕ್ ಮಾಡಿರೋ ದೂದ್ ಪೇಡಾ ದಿಗಂತ್, ಈಗ ಅಳೆದು ತೂಗಿ ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ.. ಇತ್ತೀಚೆಗಷ್ಟೆ ಹಸೆಮಣೆ ಏರಿದ ದಿಗ್ಗಿ, ನಿಧಾನವಾಗಿ ಒಂದೊಂದೇ ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ.. ಇದೀಗ ದಿಗಂತ್, ತೆಲುಗು ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳೋ ಸುದ್ದಿ ಬಂದಿದೆ..
ದೂದ್ ಪೇಡಾ ದಿಗಂತ್.. ಕನ್ನಡದ ಭರವಸೆಯ ಯುವನಟ.. ಚಾಕೋಲೇಟ್ ಬಾಯ್ ಆಗಿ ಕನ್ನಡ ಸಿನಿಮಾಗಳಲ್ಲಿ ಕಮಾಲ್ ಮಾಡ್ತಿರೋ ದಿಗಂತ್ ಬಾಲಿವುಡ್ ಕದ ಕೂಡ ತಟ್ಟಿ ಬಂದಿದ್ದಾರೆ.. ಆದ್ರೆ ಯಾಕೋ ದಿಗ್ಗಿಗೆ ಆರಂಭದಲ್ಲಿ ಸಿಕ್ಕ ಸಕ್ಸಸ್ ನಂತ್ರ ಸಿಗಲಿಲ್ಲ.. ಬಟ್ ರೀಸೆಂಟಾಗಿ ಬಂದ ಕಥೆಯೊಂದು ಶುರುವಾಗಿದೆ ಸಿನಿಮಾ ದಿಗಂತ್ಗೆ ಒಳ್ಳೆ ಹೆಸ್ರು ತಂದುಕೊಡ್ತು..
ಸೌತ್ ಸಿನಿದುನಿಯಾದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚ್ತಿದ್ದಾರೆ.. ಡಿಯರ್ ಕಾಮ್ರೇಡ್ ಸಿನಿಮಾ ರಿಲೀಸ್ಗಾಗಿ ಕಾಯ್ತಿರೋ ವಿಜಯ್, ಹೀರೋ ಅನ್ನೋ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ಧಾರೆ.. ಬೈಕ್ ರೇಸ್ಗೆ ಸಂಬಂಧಿಸಿದ ಹೀರೋ ಚಿತ್ರದಲ್ಲಿ ವಿಜಯ್ ಬೈಕ್ ಏರಿ ಸೌಂಡ್ ಮಾಡೋಕ್ಕೆ ಬರ್ತಿದ್ದಾರೆ.. ವಿಶೇಷ ಅಂದ್ರೆ, ವಿಜಯ್ಗೆ ಮೆಂಟರ್ ಆಗಿ ದಿಗಂತ್ ನಟಿಸ್ತಿದ್ದಾರೆ.. ಚಿತ್ರದಲ್ಲಿ ನಾಯಕಿಯ ಅಣ್ಣನಾಗಿ ಕಾಣಿಸಿಕೊಳ್ತಿರೋ ದಿಗಂತ್ ಟಾಲಿವುಡ್ಗೆ ಮತ್ತೆ ಎಂಟ್ರಿ ಕೊಡ್ತಿದ್ದಾರೆ..
ಹಾಗ್ ನೋಡಿದ್ರೆ, ಕನ್ನಡ ಮುಂಗಾರು ಮಳೆ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದ ದಿಗಂತ್, ಅದೇ ಸಿನಿಮಾ ತೆಲುಗಿಗೆ ರೀಮೇಕ್ ಆದಾಗ ಮತ್ತೆ ಆ ಪಾತ್ರವನ್ನೂ ಮಾಡಿದ್ರು.. ಇದೀಗ ಬಹಳ ವರ್ಷಗಳ ನಂತ್ರ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಡ್ತಿದ್ಧಾರೆ.. ಅದೂ ಕೂಡ ವಿಜಯ್ ದೇವರಕೊಂಡ ಸಿನಿಮಾ ಅನ್ನೋದು ವಿಶೇಷ.. ಈಗಾಗಲೇ ಕೋಯಮತ್ತೂರಿನಲ್ಲಿ ವಿಜಯ್ ಮತ್ತು ದಿಗಂತ್ ಬೈಕ್ ರೈಡಿಂಗ್ ಟ್ರೈನಿಂಗ್ ಸಹ ಪಡೆದುಕೊಂಡಿದ್ದಾರೆ..
ಆನಂದ್ ಅಣ್ಣಾಮಲೈ ಹೀರೋ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಮಾಳವಿಕಾ ಮೋಹನ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.. ಒಟ್ಟಾರೆ ದಿಗಂತ್ ಟಾಲಿವುಡ್ ಅಂಗಳ ಪ್ರವೇಶ ಮಾಡ್ತಿರೋದು ಅಭಿಮಾನಿಗಳು ಖುಷಿ ತಂದಿದೆ.. ಹುಟ್ಟುಹಬ್ಬ ಶುಭಾಶಯಗಳು, ಈ ಪ್ರೀತಿ ಅನ್ನೋ ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸ್ತಿರೋ ದಿಗಂತ್, ಸಿಂಪಲ್ ಸುನಿ ನಿರ್ದೇಶನದ ಮತ್ತೊಂದು ಚಿತ್ರದಲ್ಲೂ ದೂದ್ ಪೇಡಾ ದಿಗಂತ್ ಬಣ್ಣ ಹಚ್ಚಿದ್ದಾರೆ..