ಮನೋರಂಜನೆ

ಅಭಿಮಾನಿಗಳಿಗೆ ನಿರಾಸೆ ತಂದಿದೆ: ತೆಲುಗು ನಟ ಪವನ್ ಕಲ್ಯಾನ್ ಹೇಳಿಕೆ

Pinterest LinkedIn Tumblr


ಈ ಬಾರಿ ಆಂಧ್ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಪವರ್ ಸ್ಟಾರ್ ಪವನ್ ಕಲ್ಯಾಣ್.. ಜನಸೇನಾ ಪಕ್ಷ ಕಟ್ಟಿ ಚುನಾವಣಾ ಅಖಾಡಕ್ಕೆ ಧುಮುಕಿದ ಪಿಕೆ ಭರ್ಜರಿ ರೋಡ್​ ಶೋ ಮತ್ತು ಸಮಾವೇಶಗಳಿಂದ ಉಳಿದ ಪಕ್ಷಗಳಿಗೆ ನಡುಕ ಹುಟ್ಟಿಸಿದ್ರು.. ಜನಸೇನಾ ಪಕ್ಷ ಏಕಾಂಗಿಯಾಗಿ ಸರ್ಕಾರ ರಚಿಸೋಲ್ಲ ಅನ್ನೋ ಅನುಮಾನ ಇದ್ರೂ, ಕೊನೆ ಪಕ್ಷ ಪವನ್ ಕಿಂಗ್ ಮೇಕರ್ ಆಗ್ತಾರೆ ಅನ್ನೋ ಲೆಕ್ಕಾಚಾರ ನಡೆದಿತ್ತು.. ಬಟ್ ಫಲಿತಾಂಶ ನೋಡಿ ಸ್ವತ: ಜನಸೇನಾನಿ ಶಾಕ್ ಆಗಿದ್ರು..

ಆಂಧ್ರದಲ್ಲಿ ಲೋಕಸಭೆ ಚುನಾವಣೆ ಜೊತೆಗೆ ನಡೆದ ವಿಧಾನಸಭೆ ಚುನಾವಣೆ ಸಿಕ್ಕಾಪಟ್ಟೆ ರಂಗೇರಿತ್ತು.. ಆಡಳಿತ ಪಕ್ಷವನ್ನ ಬಿಟ್ಟು ಈ ಬಾರಿ ಆಂಧ್ರ ಮತದಾರರು ವೈಎಸ್​ಆರ್​ ಕಾಂಗ್ರೆಸ್​ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ಧಾರೆ.. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಕೂಡ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದು, ಸ್ವತ: ಎರಡು ಕ್ಷೇತ್ರಗಳಲ್ಲಿ ಸ್ಫರ್ಧಿಸಿದ್ದ ಪಕ್ಷ ಸಂಸ್ಥಾಪಕ ಪವನ್ ಕಲ್ಯಾಣ್ ಸೋಲುಂಡಿದ್ದಾರೆ.. ಹಾಗಂತ ಜನಸೇನಾನಿ ಸುಮ್ಮನೇ ಕೂತಿಲ್ಲ.. ಮತ್ತೆ ಜನರ ಮುಂದೆ ಬಂದಿದ್ದಾರೆ..

ಚುನಾವಣೆಯಲ್ಲಿ ಘಟಾನುಘಟಿ ಪಕ್ಷಗಳು, ಘಟಾನುಘಟಿ ನಾಯಕರಿಗೆ ಜನ ಸೋಲಿನ ಮೂಲಕ ಪಾಠ ಕಲಿಸಿದ್ದಾರೆ.. ಕೆಲ ಪಕ್ಷದ ನಾಯಕರಿಗೆ ಸೋಲಿನ ಆಘಾತದಿಂದ ಹೊರಬರೋಕ್ಕೆ ಸಾಧ್ಯವಾಗ್ತಿಲ್ಲ.. ಆದ್ರೆ, ಪವನ್ ಕಲ್ಯಾಣ್ ಮತ್ತೆ ತಳಮಟ್ಟದಿಂದ ಪಕ್ಷ ಸಂಘಟಿಸಿ ಹೋರಾಟ ಮುಂದುವರೆಸೋದಾಗಿ ಪ್ರತಿಜ್ಞೆ ಮಾಡಿದ್ದಾರೆ.. ಥೇಟ್ ಸಿನಿಮಾ ಸ್ಟೈಲ್​ನಲ್ಲಿ ಈ ಸೋಲಿಗೆ ಹೆದರಿ ನಾನು ರಾಜಕೀಯದಿಂದ ಹಿಂದೆ ಸರಿಯಲ್ಲ, ನನ್ನ ಹೋರಾಟ ನಿಲ್ಲಲ್ಲ ಅಂತ ಕೂಗಿ ಹೇಳಿದ್ದಾರೆ..

ಸೌತ್​ ಸಿನಿರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ಸಮಯದಲ್ಲೇ ಜನಸೇವೆ ಮಾಡ್ತೀನಿ ಅಂತ ಪವನ್, ರಾಜಕೀಯರಂಗ ಪ್ರವೇಶಿಸಿದ್ರು.. ಪವನ್ ಕೇಳಿದಷ್ಟು ಸಂಭಾವನೆ ಕೊಟ್ಟು ಸಿನಿಮಾ ಮಾಡೋ ನಿರ್ಮಾಪಕರು ಮನೆ ಮುಂದೆ ಕ್ಯೂ ನಿಂತಿದ್ರು, ಪವರ್ ಸ್ಟಾರ್ ಮಾತ್ರ ನಟಿಸೋಕ್ಕೆ ನೋ ಅಂತ ಹೇಳ್ತಾ ಬರ್ತಿದ್ರು.. ಹೇಗಿದ್ರು ಎಲೆಕ್ಷನ್​​ನಲ್ಲಿ ಸೋತಿದ್ದಾರೆ ಮತ್ತೆ ಚಿತ್ರರಂಗಕ್ಕೆ ಬರ್ತಾರೆ ಅಂತ ನಿರ್ಮಾಪಕರು, ಅಭಿಮಾನಿಗಳು ಕಾದಿದ್ರು.. ಆದ್ರೆ, ಅವರೆಲ್ಲರ ಆಸೆಗೆ ಜನಸೇನಾನಿ ತಣ್ಣೀರೆರಚಿದ್ದಾರೆ..

ಪಕ್ಷದ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿರೋ ಪವನ್ ಕಲ್ಯಾಣ್​ ಇನ್ನುಂದೆ ಸಿನಿಮಾಗಳಲ್ಲಿ ನಟಿಸೋ ಮಾತೇಯಿಲ್ಲ.. ನನ್ನ ಕೊನೆ ಉಸಿರಿರೋವರೆಗೂ, ನನ್ನ ಶವವನ್ನ ನಾಲ್ಕು ಜನ ಹೊತ್ತುಕೊಂಡು ಹೋಗುವವರೆಗೂ ಜನರಿಗಾಗಿ ನನ್ನ ಹೋರಾಟ ನಿಲ್ಲಲ್ಲ ಅಂತ ಹೇಳಿದ್ಧಾರೆ..

ಮತದಾರರು ವೈಎಸ್​ಆರ್ ಕಾಂಗ್ರೆಸ್​​ಗೆ ಬಹುಮತ ಕೊಟ್ಟಿದ್ಧಾರೆ.. ಜಗನ್ ಮೋಹನ್ ರೆಡ್ಡಿ ಹೊಸ ಸರ್ಕಾರ ರಚಿಸಿದ್ಧಾರೆ.. ಅವರಿಗೆ ಶುಭಾಶಯಗಳು.. ಅವರು ಐದು ವರ್ಷ ಸರ್ಕಾರ ನಡೆಸಲಿ.. ಆದ್ರೆ ಜನಕ್ಕೇನಾದ್ರೂ, ತೊಂದರೆ ಆಗ್ತಿದೆ ಅಂತ ಗೊತ್ತಾದ್ರೆ, ಬೀದಿಗಿಳಿದು ಹೋರಾಟ ನಡೆಸ್ತೀವಿ.. ಮುಂದಿನ ಐದು ವರ್ಷ ಪಕ್ಷವನ್ನ ಸಂಘಟನೆ ಮಾಡ್ತೀನಿ.. ಜನರ ಸಮಸ್ಯೆಗಳನ್ನ ಆಲಿಸ್ತೀನಿ ಅಂದಿದ್ದಾರೆ..

ಅಲ್ಲಿಗೆ ಪವರ್ ಸ್ಟಾರ್ ಸಿನಿಮಾಗಳಿಗೆ ಕಂಪ್ಲೀಟ್​ ಆಗಿ ಗುಡ್​ ಬೈ ಹೇಳಿದಂತೆ ಕಾಣ್ತಿದೆ.. ಚುನವಣೆಗೂ ಮೊದ್ಲೇ ಇನ್ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಅಂತ ಪವನ್ ಕಲ್ಯಾಣ್ ಹೇಳಿದ್ರು.. ಆದ್ರು, ಒಂದಲ್ಲ ಒಂದು ದಿನ ಮನಸು ಬದಲಿಸಿಕೊಂಡು ಅಭಿಮಾನಿಗಳನ್ನ ಗಬ್ಬರ್ ಸಿಂಗ್ ರಂಜಿಸ್ತಾರೆ ಅನ್ನಲಾಗ್ತಿತ್ತು.. ಇಷ್ಟೆಲ್ಲಾ ಆದ್ಮೇಲೂ ಪವನ್ ಕಲ್ಯಾಣ್ ಮುಂದೊಂದು ದಿನ ಸಿನಿಮಾಗಳಲ್ಲಿ ನಟಸ್ಬೋದು ಅನ್ನೋ ಆಸೆಯಲ್ಲಿ ಅಭಿಮಾನಿಗಳಿದ್ದಾರೆ..

Comments are closed.