ಮನೋರಂಜನೆ

ಮನೆ ಖಾಲಿ ಮಾಡುವಾಗ್ಲೂ ನಟ ಯಶ್​ ಕಿರಿಕ್​..!?

Pinterest LinkedIn Tumblr


ನಟ ಯಶ್​ ಬಾಡಿಗೆ ಮನೆ ವಿಚಾರದಲ್ಲಿ ಮತ್ತೊಂದು ಕಿರಿಕ್​ ಶುರುವಾಗಿದೆ. ಹೊಸಕೆರೆಹಳ್ಳಿಯ ಕತ್ರಿಗುಪ್ಪೆ ಟ್ಯಾಂಕ್​​ ಬಳಿ ಇರೋ ​ ಬಾಡಿಗೆ ಮನೆ ಖಾಲಿ ಮಾಡೋ ವೇಳೆಯೂ ಮಾಲೀಕರಿಗೆ ​ ಶಾಕ್​ ಕೊಟ್ಟಿದ್ದಾರೆ.

ಸುಮ್ಮನೆ ಮನೆ ಖಾಲಿ ಮಾಡೋದು ಬಿಟ್ಟು ರಾಕಿಂಗ್​ ಸ್ಟಾರ್​ ಕುಟುಂಬ ಮನೆಯಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿರೋ ಆರೋಪ ಎದುರಾಗಿದೆ. ಕಬೋರ್ಡ್​ನ ಬಾಗಿಲು, ಟ್ಯೂಬ್​ ಲೈಟ್​ಗಳು ನಾಪತ್ತೆಯಾಗಿರೋದು ಒಂದೆಡೆಯಾದರೆ, ಬಾತ್​ ರೂಂನ ಕಮೋಡ್​ ಹಾಗೂ ಸ್ವಿಚ್ ಬೋರ್ಡ್​ ಪೀಸ್​ ಪೀಸ್​ ಆಗಿದೆ.

ನಟ ಯಶ್ ಅವರು ಕೋರ್ಟ್ ಆದೇಶದಂತೆ ಮೇ 31ರೊಳಗೆ ಅದೃಷ್ಟದ ಮನೆ ಎಂದೇ ಕರೆಯಲಾಗಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಕೋರ್ಟ್ ಆದೇಶ ಉಲ್ಲಂಘಿಸಿ ಇನ್ನೂ ಮನೆ ಖಾಲಿ ಮಾಡದ ಬಗ್ಗೆ ನಿನ್ನೆ ಮಾಧ್ಯಮಗಳು ವರದಿ ಮಾಡಿದ ನಂತರ ಎಚ್ಚೆತ್ತುಕೊಂಡ ಯಶ್ ಕೋರ್ಟ್ ಆದೇಶದ ಪ್ರಕಾರ ಎರಡು ತಿಂಗಳು ಬಾಡಿಗೆ 80 ಸಾವಿರ ರೂ.ಗಳ ಡಿಡಿಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿ, ಮನೆ ಖಾಲಿ ಮಾಡಿದ್ದರು.

ಇದೀಗ ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದು ಹತಾಶೆಯಲ್ಲಿ ಯಶ್ ಮನೆಯಲ್ಲಿದ್ದ ವಸ್ತುಗಳನ್ನು ಪುಡಿ ಪುಡಿ ಮಾಡಿದ್ದಾರೆ ಎಂದು ಹೇಳಲಾಗುತ್ತಾದೆ.

Comments are closed.