ಮನೋರಂಜನೆ

ಯಶ್, ನಾನಿ ಇಬ್ಬರಲ್ಲಿ ನಾನಿಯನ್ನು ಆಯ್ಕೆ ಮಾಡುತ್ತೇನೆ ಎಂದ ಶ್ರದ್ಧಾ ಶ್ರೀನಾಥ್

Pinterest LinkedIn Tumblr


ಹೈದರಾಬಾದ್: ನಟಿ ಶ್ರದ್ಧಾ ಶ್ರೀನಾಥ್ ಅವರು ತೆಲುಗಿನಲ್ಲಿ ನಟಿಸಿದ ‘ಜೆರ್ಸಿ’ ಸಿನಿಮಾ ಬಿಡುಗಡೆಯಾಗಿದೆ. ಈ ವೇಳೆ ಮಾಧ್ಯಮದವರು ನೀವು ನಾನಿ ಹಾಗೂ ಯಶ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಶ್ರದ್ಧಾ ನಾನಿ ಅವರನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಉತ್ತರಿಸಿದ್ದಾರೆ.

ಕಳೆದ ಶುಕ್ರವಾರ ನಾನಿ ಹಾಗೂ ಶ್ರದ್ಧಾ ಶ್ರೀನಾಥ್ ನಟಿಸಿದ ಜೆರ್ಸಿ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ಸ್ಟಾರ್ ಆಗಿ ನಾನು ನಾನಿ ಜೊತೆ ಕೆಲಸ ಮಾಡಿದ್ದೇನೆ. ಹಾಗಾಗಿ ಯಶ್ ಬದಲು ನಾನಿ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಯಶ್ ಕೂಡ ಸ್ಟಾರ್ ಆಗಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಯಶ್ ಧಾರಾವಾಹಿಯಿಂದ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಅವರು ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರು ಕನ್ನಡ ಚಿತ್ರರಂಗವನ್ನು ಇಡೀ ಪ್ರಪಂಚಕ್ಕೆ ತೋರಿಸಿದ್ದಾರೆ. ನಾನು ಕೇವಲ ಒಂದು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ಅವರನ್ನು ಹತ್ತಿರದಿಂದ ನಾನು ನೋಡಿಲ್ಲ. ಹಾಗಾಗಿ ನಾನಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತನ್ನ ಉತ್ತರಕ್ಕೆ ಸಮರ್ಥನೆ ನೀಡಿದ್ದಾರೆ.

ನಂತರ ಮಾಧ್ಯಮದವರು ನೀವು ಸ್ಯಾಂಡಲ್‍ವುಡ್ ಹಾಗೂ ಟಾಲಿವುಡ್‍ನಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಆಗ ಶ್ರದ್ಧಾ, “ನನಗೆ ಎಲ್ಲ ಚಿತ್ರರಂಗ ಇಷ್ಟವಾಗುತ್ತದೆ. ನಾನು ಕೆಲಸವನ್ನು ಪ್ರೊಫೆಶನ್ ಆಗಿ ನೋಡುತ್ತೇನೆ. ಹಾಗಾಗಿ ನಾನು ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಒಂದು ಚಿತ್ರರಂಗ ಆಯ್ಕೆ ಮಾಡಿ ನನಗೆ ನನ್ನ ಅಭಿಮಾನಿಗಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ” ಎಂದು ಹೇಳಿದರು.

Comments are closed.