ಮನೋರಂಜನೆ

ನಟ ರಿಷಬ್ ಶೆಟ್ಟಿ ತಂದೆಯಾಗಿರುವ ಗುಟ್ಟು ಬಿಚ್ಚಿಟ್ಟ ಹರಿಪ್ರಿಯಾ!

Pinterest LinkedIn Tumblr


ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿಗೆ ಗಂಡು ಮಗು ಜನಿಸಿದಕ್ಕೆ ಸ್ಯಾಂಡಲ್‍ವುಡ್ ಕಲಾವಿದರು ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ಹಾಗೆಯೇ ನಟಿ ಹರಿಪ್ರಿಯಾ ಅವರು ರಿಷಬ್ ಶೆಟ್ಟಿ ಫೋಟೋ ಹಾಕಿ ಶುಭಾಶಯ ತಿಳಿಸಿದ್ದಾರೆ.

ಹರಿಪ್ರಿಯಾ ತಮ್ಮ ಟ್ವಿಟ್ಟರಿನಲ್ಲಿ ರಿಷಬ್ ಲಾಲಿಪಾಪ್ ಹಿಡಿದುಕೊಂಡಿರುವ ಫೋಟೋವನ್ನು ಹಾಕಿ ಅದಕ್ಕೆ, ” ”Yes?? it’s a Hero’. ಪ್ರಗತಿ ಹಾಗೂ ರಿಷಬ್ ಶೆಟ್ಟಿಗೆ ಶುಭಾಶಯಗಳು. ಗುರು, ಈಗ ಹೀರೋ ಹುಟ್ಟಿದ್ದಾನೆ. ಈಗಲಾದರೂ ನೀನು ಚಾಕ್ಲೇಟ್ ಕದಿಯುವುದನ್ನು ನಿಲ್ಲಿಸು. ಆಗ ನೀನು ನಿನ್ನ ಮಗನಿಗೆ ವಿಲನ್ ಆಗಿ ಕಾಣಿಸುವುದಿಲ್ಲ” ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

ನಟ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರಿಗೆ ಗಂಡು ಮಗು ಜನಿಸಿದೆ. ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ರಿಷಬ್ ಶೆಟ್ಟಿ ಅವರು, ”Yes?? it’s a Hero” ಎಂದು ಬರೆದ ಹುಡುಗನ ಎಮೋಜಿ ಹಾಕಿದ್ದಾರೆ. ಜೊತೆಗೆ ಆಸ್ಪತ್ರೆಯ ಬೆಡ್ ಮೇಲಿರುವ ಪತ್ನಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರು ಫ್ರೆಬವರಿ 9 ರಂದು 2017 ರಲ್ಲಿ ಮೂಲತಃ ಶಿವಮೊಗ್ಗದ ರಿಪ್ಪನ್ ಪೇಟೆಯ ಪ್ರಗತಿ ಅವರನ್ನು ಮದುವೆಯಾಗಿದ್ದರು. ಸದ್ಯಕ್ಕೆ ರಿಷಬ್ ಶೆಟ್ಟಿ ಅಭಿನಯದ `ಬೆಲ್ ಬಾಟಂ’ ಸಿನಿಮಾ 50 ದಿನಗಳನ್ನು ಪೂರೈಸಿ ಯಶಸ್ವಿ ಕಾಣುತ್ತಿದೆ.

Comments are closed.