ಮನೋರಂಜನೆ

ಪುಲ್ವಾಮಾದಲ್ಲಿ ಮಡಿದ ಯೋಧರ ಕುಟುಂಬಕ್ಕೆ ಅಮಿತಾಭ್ ನೆರವು

Pinterest LinkedIn Tumblr

ನವದೆಹಲಿ : ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಬಾಲಿವುಡ್​​​ ಬಿಗ್​​​ ಬಿ ಅಮಿತಾ ಬಚ್ಚನ್​​​ ತಲಾ 5 ಲಕ್ಷ ರೂಪಾಯಿ ನೀಡಲು ನಿರ್ಧರಿಸಿದ್ದಾರೆ. ಪುಲ್ವಾಮಾದ ಅವಂತಿಪೊರ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ರು. ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ ನೀಡಲು ಬಚ್ಚನ್​​​ ನಿರ್ಧರಿಸಿದ್ದು, ಈ ಹಣವನ್ನು ಯೋಧರ ಕುಟುಂಬಗಳಿಗೆ ಸರಿಯಾಗಿ ತಲುಪಿಸುವ ಕುರಿತು ಬಿಗ್​ ಬಿ ಚಿಂತಿಸುತ್ತಿದ್ದಾರೆ.

ಪರಿಹಾರ ನೀಡಿಕೆ ವಿಷಯ ತಿಳಿಸಿದ ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರ ವಕ್ತಾರರು, ‘ಹುತಾತ್ಮರ ಕುಟುಂಬಕ್ಕೆ 5 ಲಕ್ಷ ರು. ಘೋಷಣೆ ಮಾಡಲಾಗಿದೆ. ಸರ್ಕಾರದ ಮೂಲಕ ನೀಡಬೇಕೆ ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ,’ ಎಂದರು.

ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸದಲ್ಲಿ ಬಲಿಯಾದ ಎಲ್ಲ 40 ಸಿಆರ್‌ಪಿಎಫ್‌ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ನೀಡುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Comments are closed.