ಮನೋರಂಜನೆ

ಮಲಯಾಳಿ ನಟಿ ಲೀನಾ ಮಾರಿಯಾ ಪೌಲ್ ರ ಬ್ಯೂಟಿ ಪಾರ್ಲರ್ ಮೇಲೆ ಗುಂಡಿನ ದಾಳಿ!

Pinterest LinkedIn Tumblr


ಕೊಚ್ಚಿ: ಮಲಯಾಳಿ ನಟಿ ಲೀನಾ ಮಾರಿಯಾ ಪೌಲ್ ಒಡೆತನದ ಬ್ಯೂಟಿ ಪಾರ್ಲರ್ ಮೇಲೆ ಗ್ಯಾಂಗ್‌ಸ್ಟರ್ಸ್‌‌ ಗುಂಡಿನ ದಾಳಿ ನಡೆಸಿದ್ದಾರೆ.
ಭೂಗತ ದೊರೆ ರವಿ ಪೂಜಾರಿ ಸಹಚರರು ಈ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಅಗಂತುಕರು ದೂರವಾಣಿ ಕರೆ ಮಾಡಿ 25 ಕೋಟಿ ರುಪಾಯಿಗೆ ಇಟ್ಟಿದ್ದರು ಎಂದು ಲೀನಾ ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಈ ಗುಂಡಿನ ದಾಳಿಯಿಂದಾಗಿ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಹೂಡಿಕೆದಾರರಿಗೆ ವಂಚಿಸಿದ್ದ ಪ್ರಕರಣ ಸಂಬಂಧ ಲೀನಾರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು.

Comments are closed.