ಮನೋರಂಜನೆ

ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕ ಆಸ್ತಿ ವಿವರ ಏನು?

Pinterest LinkedIn Tumblr


ಬೆಂಗಳೂರು: ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿರುವ ಅನುಮಾನದ ಮೇಲೆ ಸ್ಯಾಂಡಲ್​ವುಡ್​ ತಾರೆಗಳು ಮತ್ತು ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದು, ರಾಕಿಂಗ್​ಸ್ಟಾರ್​ ಯಶ್​ ಅವರ ಆಸ್ತಿ ವಿವರ ಪಡೆದುಕೊಳ್ಳುತ್ತಿದ್ದಾರೆ.

ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಯಶ್ ಮನೆ ಪರಿಶೀಲನೆ ಆರಂಭಿಸಿದ ಐಟಿ ಅಧಿಕಾರಿಗಳು ಇಲ್ಲಿಯವರೆಗೂ ಯಶ್ ಆಸ್ತಿ ವಿವರ ದಾಖಲೆಗಳನ್ನು ಪಡೆದು, ಪರಿಶೀಲನೆ ನಡೆಸಿದ್ದಾರೆ.

​ಎಂಟು ಎಕರೆ ಜಮೀನು ಖರೀದಿಸಲು ವಿವಿಧ ಬ್ಯಾಂಕ್​ಗಳಲ್ಲಿ 40 ಕೋಟಿ ರೂ. ಸಾಲ ಪಡೆದಿರುವುದಾಗಿ ಯಶ್​ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಯಶ್ ಸದ್ಯದ ಆಸ್ತಿ ವಿವರ

ಹೊಸಕೆರೆಹಳ್ಳಿಯಲ್ಲಿ 80*60 ವಿಸ್ತೀರ್ಣದ ಮನೆ.
ಗಾಲ್ಫ್ ಕ್ಲಬ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್​ಮೆಂಟ್​ನಲ್ಲಿ ‘ಪೆಂಟ್​ ಹೌಸ್​’ ಖರೀದಿ. ಇದರ ಬೆಲೆ ಅಂದಾಜು 8 ಕೋಟಿ ರೂ. ಎನ್ನಲಾಗಿದೆ.
ಮಂಡ್ಯದ ಸಮೀಪ ಎಂಟು ಎಕರೆ ಜಮೀನು ಖರೀದಿ.
ಸದ್ಯ ತಾಜ್ ವೆಸ್ಟೆಂಡ್ ನಲ್ಲಿ ವಾಸ್ತವ್ಯ. ತಿಂಗಳಿಗೆ ಲಕ್ಷಾಂತರ ರೂ. ಬಾಡಿಗೆ ಪಾವತಿ.
ಇದೇ ವೇಳೆ ಯಶ್​ ಪತ್ನಿ ರಾಧಿಕಾ ಪಂಡಿತ್ ಅವರ ಮಲ್ಲೇಶ್ವರಂನಲ್ಲಿರುವ ನಿವಾಸಕ್ಕೂ ಐಟಿ ಅಧಿಕಾರಿಗಳು ತೆರಳಿದ್ದು, ಸದ್ಯ ಮನೆಯ ಮೂವರು ಚಾಲಕರ ಪೈಕಿ ಒಬ್ಬ ಚಾಲಕನನ್ನು ಐಟಿ ಅಧಿಕಾರಿಗಳು ಇನೋವಾ ಕಾರ್​ನಲ್ಲಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

Comments are closed.