ಮನೋರಂಜನೆ

12 ದಿನಗಳಲ್ಲಿ ಕೆಜಿಎಫ್ ಸಿನಿಮಾ ಗಳಿಸಿದ ಹಣವೆಷ್ಟು?

Pinterest LinkedIn Tumblr


ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನ, ಯಶ್ ನಟನೆಯ ಸ್ಯಾಂಡಲ್ವುಡ್​ನ ಬ್ಲಾಕ್​ಬಸ್ಟರ್ ಸಿನಿಮಾ ಕೆಜಿಎಫ್ ತನ್ನ ಯಶಸ್ಸಿನ ನಾಗಾಲೋಟವನ್ನು ಮುಂದುವರಿಸಿದೆ. ಎರಡನೇ ವೀಕೆಂಡ್​ನಲ್ಲೂ ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಂಡ ಕೆಜಿಎಫ್ ಸಿನಿಮಾ ಹೊಸ ಹೊಸ ದಾಖಲೆ ಸೃಷ್ಟಿಸಿ 200 ಕೋಟಿ ರೂ ಗಳಿಕೆಯತ್ತ ದಾಪುಗಾಲಿಕ್ಕಿದೆ. ಬಿಡುಗಡೆಯಾಗಿ 12 ದಿನಗಳಲ್ಲಿ ಕೆಜಿಎಫ್ ವಿಶ್ವಾದ್ಯಂತ ಗಳಿಸಿದ ಕಲೆಕ್ಷನ್ ಬರೋಬ್ಬರಿ 165 ಕೋಟಿ ರೂ. ಕರ್ನಾಟಕದಲ್ಲೇ 100 ಕೋಟಿ ರೂ ಸನಿಹಕ್ಕೆ ಕೆಜಿಎಫ್ ಬಂದಿದೆ. ಹಿಂದಿ ಪ್ರದೇಶಗಳಲ್ಲೂ ಕೆಜಿಎಫ್ ಹವಾ ಜೋರಾಗಿದ್ದು ಸುಮಾರು 40 ಕೋಟಿ ರೂ ಆಸುಪಾಸಿನಲ್ಲಿ ಹಣ ಮಾಡಿದೆ.

12 ದಿನಗಳಲ್ಲಿ ಕೆಜಿಎಫ್ ಗಳಿಸಿದ ಹಣ:

ಕರ್ನಾಟಕ: 95.50 ಕೋಟಿ ರೂ.
ಆಂಧ್ರ, ತೆಲಂಗಾಣ: 16.50 ಕೋಟಿ

ತಮಿಳುನಾಡು: 7 ಕೋಟಿ
ಕೇರಳ: 1.90 ಕೋಟಿ
ಭಾರತದ ಇತರೆ ಭಾಗಗಳಲ್ಲಿ: 39 ಕೋಟಿ

ವಿದೇಶಗಳಲ್ಲಿ: 5.40 ಕೋಟಿ

ಕರ್ನಾಟಕದಲ್ಲಿ ಅತಿ ಹೆಚ್ಚು ಹಣ ಗಳಿಸಿದ ದಾಖಲೆ ಬಾಹುಬಲಿ ಹೆಸರಲ್ಲೇ ಇದೆ. ಎರಡನೇ ಭಾಗದ ಬಾಹುಬಲಿ ಸಿನಿಮಾ ಕರ್ನಾಟಕದಲ್ಲಿ ಬರೋಬ್ಬರಿ 129 ಕೋಟಿ ರೂ ಬ್ಯುಸಿನೆಸ್ ಮಾಡಿತ್ತು. ಯಶ್ ಸಿನಿಮಾ ಈ ದಾಖಲೆಯನ್ನು ಮುರಿಯುವ ಹಾದಿಯಲ್ಲಿದೆ. ಆದರೆ, ಬಾಹುಬಲಿ-2 ಸಿನಿಮಾ ವಿಶ್ವಾದ್ಯಂತ 1,800 ಕೋಟಿ ರೂ.ಗೂ ಹೆಚ್ಚು ಆದಾಯ ಮಾಡಿ ದಕ್ಷಿಣ ಭಾರತೀಯ ಚಿತ್ರರಂಗದತ್ತ ಎಲ್ಲರ ಕಣ್ಣು ನೆಡುವಂತೆ ಮಾಡಿತು. ಈಗ ಕೆಜಿಎಫ್ ಮಾಡುತ್ತಿರುವ ಶಬ್ದ ಕೂಡ ಹಲವರು ಸ್ಯಾಂಡಲ್ವುಡ್​ನತ್ತ ಕಣ್ಣೊರಳಿಸುವಂತಾಗುತ್ತಿದೆ.

ಕ್ರಿಸ್ಮಸ್ ರಜೆಯ ಸೀಸನ್​ನಲ್ಲಿ ಸರಿಯಾಗಿ ಬಿಡುಗಡೆಯಾಗಿದ್ದು ಕೆಜಿಎಫ್​ಗೆ ಅನುಕೂಲವಾಗಿದ್ದು ಹೌದು. ಧನುಶ್, ಶಾರುಕ್ ಖಾನ್ ಮೊದಲಾದ ಸ್ಟಾರ್​ಗಳ ಸಿನಿಮಾಗಳ ಸ್ಪರ್ಧೆಗಳ ನಡುವೆಯೂ ಕೆಜಿಎಫ್ ಯಶಸ್ವಿಯಾಗಿ ಮುನ್ನುಗ್ಗುತ್ತಿರುವುದು ಗಮನಾರ್ಹ. ಈ ವಾರ ಸಿಮ್​ಬಾ ಮೊದಲಾದ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಿ ಕೆಜಿಎಫ್ ಓಟಕ್ಕೆ ತುಸು ತಡೆ ಬಿದ್ದಿದೆ.

Comments are closed.