ಮನೋರಂಜನೆ

ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಗಾಯಕಿ; ಫೇಸ್ ಬುಕ್ ಲೈವ್‌ನಲ್ಲಿ ಇಲಿ ಪಾಶಾಣ ಕುಡಿದು ಆತ್ಮಹತ್ಯೆಗೆ ಯತ್ನ

Pinterest LinkedIn Tumblr

ಚಂಡೀಗಢ: ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಗಾಯಕಿ ಕಮ್ ಡ್ಯಾನ್ಸರ್ ಫೇಸ್ ಬುಕ್ ಲೈವ್‌ನಲ್ಲಿ ಇಲಿ ಪಾಶಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಹರಿಯಾಣದ ಗಾಯಕಿ ಮತ್ತು ಡ್ಯಾನ್ಸರ್ 30 ವರ್ಷದ ಅನಾಮಿಕ ಬಾವಾ ಆತ್ಮಹತ್ಯೆಗೆ ಯತ್ನಿಸಿದ ಗಾಯಕಿ. ಅನಾಮಿಕ ಅವರು ಅನ್ನೆ ಬಿ ಎಂದು ಖ್ಯಾತರಾಗಿದ್ದರು. ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅನಾಮಿಕ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಅನಾಮಿಕರನ್ನು ಹಿಸ್ಸರ್ ಆಸ್ಪತ್ರಗೆ ದಾಖಲಿಸಲಾಗಿತ್ತು. ಪ್ರಾಣಾಪಾಯದಿಂದ ಪಾರಾದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ತನ್ನ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಭಾನುವಾರ ಆಸ್ಪತ್ರೆ ಸಿಬ್ಬಂದಿ ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಆಸ್ಪತ್ರೆಗೆ ಬಂದ ಪೊಲೀಸರು ಅನಾಮಿಕ ಅವರ ಹೇಳಿಕೆ ಪಡೆಯಲು ತಂಡವನ್ನು ರಚಿಸಿ ಅವರ ಮನೆಗೆ ಕಳುಹಿಸಲಾಯಿತು ಎಂದು ಪೊಲೀಸ್ ವಕ್ತಾರ ಹರೀಶ್ ಭಾರದ್ವಾಜ್ ತಿಳಿಸಿದ್ದಾರೆ.

2013ರಲ್ಲಿ ಅನಾಮಿಕ ಬಾವಾ ರೋಹ್ಟಕ್ ನಲ್ಲಿ ವಿಡಿಯೋ ಎಡಿಟರ್ ಶೇಖರ್ ಖನ್ನಾ ಎಂಬುವರನ್ನು ವಿವಾಹವಾಗಿದ್ದರು. ಅನಾಮಿಕ ಒಟ್ಟಾರೆ 2500ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

Comments are closed.