ಮನೋರಂಜನೆ

ಸಾಹಸಸಿಂಹ ವಿಷ್ಣುವರ್ಧನ್ 9ನೇ ಪುಣ್ಯಸ್ಮರಣೆ; ಸಮಾಧಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು

Pinterest LinkedIn Tumblr

ಬೆಂಗಳೂರು: ಕನ್ನಡಿಗರ ಕಣ್ಮಣಿ, ಅಭಿನವ ಭಾರ್ಗವ, ಸಾಹಸಸಿಂಹ ವಿಷ್ಣುವರ್ಧನ್ ನಮ್ಮನ್ನಗಲಿ ಇಂದು 9 ವರ್ಷಗಳಾಗಿದ್ದು ಅಭಿಮಾನ್ ಸ್ಟುಡಿಯೋ ಆವರಣದಲ್ಲಿರುವ ವಿಷ್ಣು ಸ್ಮಾರಕದಲ್ಲಿ ಅಭಿಮಾನಿಗಳು ಪುಣ್ಯಸ್ಮರಣೆ ಆಚರಿಸಿ ಪುಷ್ಪ ನಮನ ಸಲ್ಲಿಸಿದರು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸುತ್ತಿರುವ ಸಾವಿರಾರು ಸಂಖ್ಯೆಯ ಅಭಿಮಾನಿಗಳು ವಿಷ್ಣು ಸಮಾಧಿಗೆ ಗೌರವ ಸಲ್ಲಿಸುತ್ತಿದ್ದಾರೆ. ಆದರೆ ಸ್ಮಾರಕ ನಿರ್ಮಾಣ ವಿವಾದದ ಹಿನ್ನೆಲೆಯಲ್ಲಿ ವಿಷ್ಣು ಕುಟುಂಬಸ್ಥರು ಅಭಿಮಾನ್ ಸ್ಟುಡಿಯೋಗೆ ತೆರಳುವುದಿಲ್ಲ ಎನ್ನಲಾಗುತ್ತಿದೆ.

ನಿನ್ನೆಯಿಂದಲೇ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗುತ್ತಿದ್ದು ಇಂದು ಸ್ಥಳದಲ್ಲಿ ಅನ್ನದಾನವನ್ನೇರ್ಪಡಿಸಲಾಗಿದೆ.

ಇದರ ಜತೆಗೆ ಆರೋಗ್ಯ ತಪಾಸಣೆ ಶಿಬಿರ, ನೇತ್ರದಾನಕ್ಕೆ ನೋಂದಣಿ, ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ವಿಷ್ಣುವರ್ಧನ್ ಅವರು 2009ರ ಡಿಸೆಂಬರ್ 30ರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.

Comments are closed.