ಮನೋರಂಜನೆ

ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ

Pinterest LinkedIn Tumblr


ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಬಹುದಿನದ ಗೆಳೆಯ ರಣ್‍ವೀರ್ ಸಿಂಗ್ ಜೊತೆ ಇಟಲಿಯ ಲೇಕ್ ಕೋಮೋದಲ್ಲಿ ಅದ್ಧೂರಿಯಾಗಿ ಮದುವೆಯಾದ ಬಳಿಕ ಮೊದಲ ಬಾರಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ದೀಪಿಕಾ ತನ್ನ ಜೀವನದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ದೀಪಿಕಾ ಫಿಲ್ಮ್‍ಫೇರ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದಾರೆ. ನಾನು ಹಾಗೂ ರಣ್‍ವೀರ್ ನಾಲ್ಕು ವರ್ಷದ ಹಿಂದೆ ಎಂಗೇಜ್ ಆಗಿದ್ದೀವಿ. ಈ ವಿಷಯ ನನ್ನ ಕುಟುಂಬದವರು ಹಾಗೂ ರಣ್‍ವೀರ್ ಕುಟುಂಬದವರನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ ಎಂದು ಮದುವೆ ಮೊದಲು ತಮ್ಮ ಹಾಗೂ ರಣ್‍ವೀರ್ ಸಂಬಂಧದ ಬಗ್ಗೆ ದೀಪಿಕಾ ಮಾತನಾಡಿದರು.

ಇದೇ ವೇಳೆ ಸಂದರ್ಶನದಲ್ಲಿ ದೀಪಿಕಾ ಅವರನ್ನು ನಿಮಗೆ ಈಗ ಮದುವೆ ಆಗಿದೆ. ಈಗ ನೀವು ಲಿಪ್ ಕಿಸ್ ಮಾಡುವುದನ್ನು ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಪ್ರಶ್ನೆ ಕೇಳಿದ ತಕ್ಷಣ ದೀಪಿಕಾ ತಲೆ ತಗ್ಗಿಸಿ ಛೀ.. ಎಂದು ನಗುತ್ತಾ ಪ್ರತಿಕ್ರಿಯಿಸಿದರು. ಅಲ್ಲದೇ ಅಭಿಮಾನಿಯೊಬ್ಬರು ದೀಪಿಕಾ ಅವರಿಗೆ ನಿಮ್ಮ ಹಣವೆಲ್ಲಾ ಮದುವೆಗೆ ಖರ್ಚು ಮಾಡುತ್ತೀರಾ? ಎಂದು ಪ್ರಶ್ನೆಯನ್ನು ಕೇಳಿದ್ದರು. ಆಗ ದೀಪಿಕಾ ನನ್ನ ಬಳಿ ಸಾಕಷ್ಟು ಹಣವಿದೆ. ಯೋಚನೆ ಮಾಡಬೇಡಿ ಎಂದು ಉತ್ತರಿಸಿದರು.

ಈ ಸಂದರ್ಶನದಲ್ಲಿ ದೀಪಿಕಾ ಅವರಿಗೆ ತಮ್ಮ ಹನಿಮೂನ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಕೆಲಸದ ಒತ್ತಡದಿಂದ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಇನ್ನೂ ತಮ್ಮ ಹನಿಮೂನ್ ಪ್ಲಾನ್ ಮಾಡಿಲ್ಲ. ಈ ಬಗ್ಗೆ ದೀಪಿಕಾ ಅವರನ್ನು ಕೇಳಿದ್ದಾಗ ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾವು ಇದುವರೆಗೂ ಯಾವುದೇ ಹನಿಮೂನ್ ಪ್ಲಾನ್ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು.

ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಹಾಗೂ ನವೆಂಬರ್ 15ರಂದು ಕೊಂಕಣಿ ಮತ್ತು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಟಲಿಯಿಂದ ಬಂದ ನಂತರ ಈ ಜೋಡಿ ಬೆಂಗಳೂರಿನಲ್ಲಿ ಹಾಗೂ ಮುಂಬೈನಲ್ಲಿ ಎರಡು ಬಾರಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿತು.

Comments are closed.