ಮನೋರಂಜನೆ

ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್, ಅತಿ ಕೆಟ್ಟ ವರ್ತನೆಯ ಆಟಗಾರ: ನಟ ನಾಸಿರುದ್ದೀನ್ ಶಾ

Pinterest LinkedIn Tumblr


ಮುಂಬೈ: ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್. ಆದರೆ, ವಿಶ್ವದ ಅತೀ ಕೆಟ್ಟ ದುರ್ವರ್ತನೆಯ ಆಟಗಾರನೆಂದು ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಕಿಡಿಕಾರಿದ್ದಾರೆ.

ಆಸ್ಟ್ರೇಲಿಯಾದ ಟೆಸ್ಟ್ ಪಂದ್ಯದಲ್ಲಿ ಕಿತ್ತಾಡಿಕೊಂಡಿದ್ದ ಕ್ಯಾಪ್ಟನ್ ಕೊಹ್ಲಿಯವರ ವರ್ತನೆ ಹಾಗೂ ಅಭಿಮಾನಿಯೊಬ್ಬರಿಗೆ ದೇಶಬಿಟ್ಟು ಹೋಗು ಎಂಬ ಹೇಳಿಕೆಗೆ ಫೇಸ್‍ಬುಕ್ ಮೂಲಕ ನಾಸಿರುದ್ದೀನ್ ಶಾ ಶಾ ಆಕ್ರೋಶ ಹೊರಹಾಕಿದ್ದಾರೆ.

ಕೊಹ್ಲಿ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿರಬಹುದು. ಆದರೆ ಅವರು ವಿಶ್ವದ ಅತಿ ಕೆಟ್ಟ ವರ್ತನೆಯ ಆಟಗಾರನೂ ಹೌದು. ಕ್ರಿಕೆಟ್ ಬದುಕಿನಲ್ಲಿ ತನ್ನ ಸೊಕ್ಕಿನ ಹಾಗೂ ಕೆಟ್ಟ ನಡವಳಿಕೆಯನ್ನು ತೋರುತ್ತಲೇ ಇದ್ದಾರೆ. ಇಷ್ಟೆಲ್ಲಾ ಆದರೂ ನಾನು ದೇಶ ಬಿಡುವ ಯಾವುದೇ ಉದ್ದೇಶವಿಲ್ಲವೆಂದು ನಾಸಿರುದ್ದೀನ್ ಶಾ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ನಾಸಿರುದ್ದೀನ್ ಶಾರವರ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ಶಾ ಪರವಾಗಿ ಮಾತನಾಡಿದ್ದರೆ, ಮತ್ತೆ ಕೆಲವರು ಖ್ಯಾತ ಆಟಗಾರನ ಕುರಿತು ಈ ರೀತಿ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಅವರ ಪೋಸ್ಟನ್ನು ಈಗಾಗಲೇ 2 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಲೈಕ್ ಮಾಡಿದ್ದು, 60ಕ್ಕೂ ಹೆಚ್ಚು ಜನರು ಶೇರ್ ಮಾಡಿಕೊಂಡಿದ್ದಾರೆ.

ಟೆಸ್ಟ್‌ನಲ್ಲಿ ಕೊಹ್ಲಿ ಮಾಡಿದ್ದೇನು?
ಸೋಮವಾರ ಪರ್ತ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ 4ನೇ ದಿನದಾಟದಲ್ಲಿ, ಬುಮ್ರಾ ಬೌಲ್ ಮಾಡುತ್ತಿದ್ದ 71 ನೇ ಓವರ್ ನಲ್ಲಿ ಕೊಹ್ಲಿ ನಾನ್ ಸ್ಟ್ರೈಕರ್ ಎಂಡ್ ಬಳಿಕ ಫೀಲ್ಡ್ ಮಾಡಲು ನಿರ್ಧರಿಸಿದ್ದರು. ಈ ವೇಳೆ ರನ್ ಓಡುತ್ತಿದ್ದ ಟಿಮ್ ಪೇನ್ ಗೆ ಅಡ್ಡ ಬಂದ ಕೊಹ್ಲಿ ನೇರವಾಗಿ ಮುಖಾಮುಖಿಯಾಗಿ ನಿಂತಿದ್ದರು. ಆಗ ವಿರಾಟ್ ಕೊಹ್ಲಿ ಹಾಗೂ ಟಿಮ್ ಪೇನ್ ನಡುವೆ ವಾಕ್ಸಮರ ಏರ್ಪಟಿತ್ತು. ಇದನ್ನು ಕಂಡ ಅಂಪೈರ್ ಇಬ್ಬರು ಆಟಗಾರರಿಗೂ ನೀವು ತಂಡದ ನಾಯಕರು, ಇಲ್ಲಿಗೆ ಬಿಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದರು.

Comments are closed.