ಮನೋರಂಜನೆ

30 ಕೆ.ಜಿ ತೂಕ ಇಳಿಸಿದ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ

Pinterest LinkedIn Tumblr


ಮುಂಬೈ: ಬಾಲಿವುಡ್ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಬರೋಬ್ಬರಿ 30 ಕೆ.ಜಿ ತೂಕ ಇಳಿಸಿಕೊಂಡು ಹಾಟ್ ಆ್ಯಂಡ್ ಸೆಕ್ಸಿ ಆಗಿದ್ದಾರೆ.

ಕಾಸ್ಮೋಪಾಲಿಟನ್ ಮ್ಯಾಗಜೀನ್‍ಗಾಗಿ ಸೋನಾಕ್ಷಿ ಸಿನ್ಹಾ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್‍ನಲ್ಲಿ ಸೋನಾಕ್ಷಿ ಹಾಟ್ ಲುಕ್‍ನಲ್ಲಿ ಮಿಂಚಿದ್ದಾರೆ. ಈ ಹಿಂದೆ ಸೋನಾಕ್ಷಿ ಹೊಸ ಲುಕ್ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಈ ಫೋಟೋಶೂಟ್‍ನಲ್ಲಿ ಸೋನಾಕ್ಷಿ ಸಾಕಷ್ಟು ಗ್ಲಾಮರಸ್ ಆಗಿ ಕಾಣಿಸಿದ್ದಾರೆ.

ಈ ಮ್ಯಾಗಜೀನ್‍ನ ಫೋಟೋಶೂಟ್‍ನಲ್ಲಿ ಸೋನಾಕ್ಷಿ ಹಲವು ಔಟ್‍ಫಿಟ್ ಧರಿಸಿದ್ದಾರೆ. ಅದರಲ್ಲಿ ಗೋಲ್ಡನ್ ಬಣ್ಣದ ಉಡುಪು ಧರಿಸಿ ವಿಂಗ್ ಐಲೈನರ್ ಹಚ್ಚಿದ್ದಾರೆ. ಮತ್ತೊಂದು ಫೋಟೋದಲ್ಲಿ ಸೋನಾಕ್ಷಿ ಕ್ರಾಪ್ ಟಾಪ್ ಧರಿಸಿ, ಮಲ್ಟಿಕಲರ್ ಹೈಸಿಲ್ಟ್ ಸ್ಕರ್ಟ್ ಧರಿಸಿ ಹಾಟ್ ಅವತಾರದಲ್ಲಿ ಮಿಂಚಿದ್ದಾರೆ.

ಸೋನಾಕ್ಷಿ ಸಲ್ಮಾನ್ ಖಾನ್ ನಟನೆಯ ದಬಾಂಗ್ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ತಮ್ಮ ಮೊದಲ ಚಿತ್ರದಿಂದಲೂ ಸೋನಾಕ್ಷಿ ದಪ್ಪಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತೂಕ ಹಾಗೂ ಡ್ರೆಸಿಂಗ್ ಸೆನ್ಸ್ ಬಗ್ಗೆ ಟ್ರೋಲ್ ಆಗುತ್ತಿದ್ದರು. ಆದರೆ ಈಗ ಸೋನಾಕ್ಷಿ ಈ ಫೋಟೋಶೂಟ್ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ಸೋನಾಕ್ಷಿ ಅವರ ಈ ಬದಲಾವಣೆ ಬಗ್ಗೆ ಎಲ್ಲರೂ ಪ್ರಶ್ನಿಸುತ್ತಿದ್ದರು. ಸೋನಾಕ್ಷಿ ಮ್ಯಾಗಜಿನ್‍ವೊಂದರ ಸಂದರ್ಶನದಲ್ಲಿ ಇದಕ್ಕೆ ಉತ್ತರಿಸಿದ್ದಾರೆ. ನಾನು ನನ್ನ ದೇಹದ ಮೇಲೆ ಹೆಚ್ಚು ಶ್ರಮವಹಿಸಿದ ಕಾರಣ ನನ್ನಲ್ಲಿ ಈ ಬದಲಾವಣೆ ಕಂಡಿದೆ ಎಂದು ಸೋನಾಕ್ಷಿ ಸಿನ್ಹಾ ತಿಳಿಸಿದ್ದಾರೆ.

Comments are closed.