ಮನೋರಂಜನೆ

ಸುರಗಿ ಚಿತ್ರಕ್ಕಾಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಭಾವನಾ

Pinterest LinkedIn Tumblr


ಬೆಂಗಳೂರು: ಭಾವನಾ ರಾಮಣ್ಣ ಚಂದನವನ ಕಂಡ ಮುದ್ದಾದ `ಪ್ರಾಣಸಖಿ’. ಚಂದ್ರಮುಖಿ ಪ್ರಾಣಸಖಿ ಸಿನಿಮಾದಲ್ಲಿ ಹುಡುಗಾಟದ ಹುಡುಗಿಯಾಗಿ ಕರುನಾಡಿನ ಮನೆಮಾತಾದರು. ಸಿನಿಮಾ ಆಯ್ಕೆಯಲ್ಲಿ ತುಂಬಾನೇ ಚೂಸಿಯಾಗಿರುವ ಭಾವನಾ ನಟಿಸಿದ ಸಿನಿಮಾಗಳಲ್ಲಿ ವಿಭಿನ್ನ ಪಾತ್ರವಾಗಿ ಕಾಣಿಸಿಕೊಳ್ಳುವ ಮೂಲಕ ಇಂದಿಗೂ ಬಹುಜನರ ನೆಚ್ಚಿನ ನಟಿಯಾಗಿದ್ದಾರೆ. ಅಪೂರ್ವ ಕಾಸರವಳ್ಳಿ ನಿರ್ದೇಶನದ ‘ನಿರುತ್ತರ’ ಸಿನಿಮಾಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ನಿರುತ್ತರ ನಂತರ ಮತ್ತೊಂದು ವಿಶೇಷ ಕಥೆಯುಳ್ಳ ‘ಸುರಗಿ’ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಅದ್ವೈತ, ಮೈತ್ರಿ, ಅಮರಾವತಿ ಸಿನಿಮಾ ಖ್ಯಾತಿಯ ಜಟ್ಟ ಗಿರಿರಾಜ್ ಸುರಗಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮನು ಹೆಗಡೆ ಮತ್ತು ಧನ್ಯಾ ಬಾಲಕೃಷ್ಣ ನಾಯಕ-ನಾಯಕಿಯಾಗಿ ನಟಿಸಲಿದ್ದಾರೆ. ನಿರ್ಮಾಣದ ಜೊತೆಗೆ ಭಾವನಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದು, ಯಾವ ರೋಲ್ ಎಂಬುವುದನ್ನು ರಿವೀಲ್ ಮಾಡಿಲ್ಲ. ಚಿತ್ರಕ್ಕಾಗಿಯೇ ಭಾವನಾ ಹಾಟ್ ಫೋಟೋ ಶೂಟ್ ಮಾಡಿಸಿದ್ದು, ಪಡ್ಡೆ ಹುಡುಗರು ಕಣ್ಣರಳಿಸಿ ತಮ್ಮತ್ತ ನೋಡುವಂತೆ ಮಾಡಿದ್ದಾರೆ.

ಸಂಕ್ರಾಂತಿಗೆ ಸುರಗಿ ಮುಹೂರ್ತ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ. ಹಾಗಾಗಿ ಮೊದಲ ಹಂತದಲ್ಲಿ ವಿದೇಶಿ ಫೋಟೋಗ್ರಾಫರ್ ಅವರಿಂದ ನಾಯಕ, ನಾಯಕಿಯ ಫೋಟೋ ಶೂಟ್ ಮಾಡಿಸಲಾಗಿದೆ. ಸಿನಿಮಾ ಸೆಟ್ ಏರುವ ಮುನ್ನ ತರಬೇತಿ ನೀಡಲಾಗುವುದು ಎಂದು ಭಾವನಾ ಹೇಳಿದ್ದಾರೆ.

Comments are closed.