ಮನೋರಂಜನೆ

ನಾನು ಮದುವೆಯಾಗಲು ವರ ಸಿಗುತ್ತಿಲ್ಲ: ಬಾಲಿವುಡ್ ನಟಿ ಕತ್ರಿನಾ ಕೈಫ್

Pinterest LinkedIn Tumblr


ಮುಂಬೈ: ಬಾಲಿವುಡ್ ಸೆಕ್ಸಿ ಗರ್ಲ್ ಕತ್ರಿನಾ ಕೈಫ್ ಮದುವೆಗಾಗಿ ಕಾಯುತ್ತಿದ್ದಾರಂತೆ. ಮದುವೆ ಆಗಲು ನಿರ್ಧರಿಸಿದ್ದು, ಸೂಕ್ತ ವರನಿಗಾಗಿ ಕತ್ರಿನಾ ಮತ್ತು ಕುಟುಂಬಸ್ಥರು ಹುಡುಕಾಟದಲ್ಲಿದ್ದಾರೆ ಎಂದು ಮಾಧ್ಯಮವೊಂದು ಸುದ್ದಿಯನ್ನು ಪ್ರಸಾರ ಮಾಡಿದೆ.

ಬಾಲಿವುಡ್ ನಲ್ಲಿ ತಮ್ಮ ಮೋಹಕ ಮೈಮಾಟದ ಮೂಲಕವೇ ಹೆಸರು ಮಾಡಿದ ಕತ್ರಿನಾ ಅವರ ಸಿನಿ ಕೆರಿಯರ್ ಆರಂಭದಿಂದಲೂ ಕೆಲ ನಾಯಕರ ಜೊತೆ ತುಳುಕು ಹಾಕಿಕೊಂಡಿತ್ತು. ಆರಂಭದಲ್ಲಿ ಭಾಯಿಜಾನ್ ಸಲ್ಮಾನ್ ಖಾನ್ ಅವರನ್ನೇ ಕತ್ರಿನಾ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿತ್ತು. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಬ್ರೇಕಪ್ ಮಾಡಿಕೊಂಡಿದ್ದರು.

ಈ ಎಲ್ಲ ಘಟನೆಗಳಿಂದ ನೊಂದಿದ್ದ ಕತ್ರಿನಾ ಲೈಫ್ ಎಂಟ್ರಿ ಕೊಟ್ಟಿದ್ದು ಚಾಕ್ಲೇಟ್ ಹೀರೋ ರಣ್‍ಬೀರ್ ಕಪೂರ್. ಸಿನಿಮಾದಲ್ಲಿ ಜೊತೆಯಾಗಿದ್ದ ರಣ್‍ಬೀರ್ ಸದ್ದಿಲ್ಲದೇ ಕತ್ರಿನಾಗೆ ಹತ್ತಿರವಾಗುತ್ತಾ ಹೋದರು. ಇಬ್ಬರು ಜೊತೆಯಾಗಿ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸತೊಡಗಿದರು. ಕತ್ರಿನಾ ಮತ್ತು ರಣ್‍ಬೀರ್ ವಿದೇಶ ಪ್ರವಾಸದಲ್ಲಿ ಮೋಜಿನಲ್ಲಿ ತೊಡಗಿಕೊಂಡಿದ್ದ ಫೋಟೋ ವೈರಲ್ ಆಗಿತ್ತು.

ಕೆಲವು ದಿನಗಳ ನಂತರ ನಾವಿಬ್ಬರು ಬೇರೆಯಾಗಿದ್ದೇವೆ ಎಂಬ ಸಂದೇಶವನ್ನು ಈ ಜೋಡಿ ಪರೋಕ್ಷವಾಗಿ ಹೊರಹಾಕಿತ್ತು. ಕತ್ರಿನಾಳಿಂದ ದೂರವಾದ ರಣ್‍ಬೀರ್ ಇದೀಗ ಆಲಿಯಾ ಭಟ್ ಜೊತೆ ಡೇಟಿಂಗ್ ನಲ್ಲಿದ್ದಾರೆಂಬ ಸುದ್ದಿಯೊಂದು ಬಾಲಿವುಡ್ ಲೋಕದಲ್ಲಿ ಸದ್ಯ ಹರಿದಾಡುತ್ತಿದೆ. ಇತ್ತ ಕತ್ರಿನಾ ಮತ್ತೆ ಹಳೆ ಗೆಳೆಯ ಸಲ್ಮಾನ್ ಖಾನ್ ಗೆ ಹತ್ತಿರವಾಗುತ್ತಿದ್ದು, ಸತತ ಸೋಲುಗಳಿಂದ ನಿರಾಸೆಗೊಳಗಾದ ಗೆಳತಿ ಸಿನಿಮಾ ಆಯ್ಕೆಯಲ್ಲಿ ಸುಲ್ತಾನ್ ಸಲಹೆ ನೀಡುತ್ತಿದ್ದಾರೆ.

ಬಾಲಿವುಡ್ ನಾಯಕರು ನನ್ನ ಪತಿಯಾಗಿ ಬರೋದು ಬೇಡ ಅಂತಾ ಕತ್ರಿನಾ ನಿರ್ಧರಿಸಿದ್ದಾರಂತೆ. ಹಾಗಾಗಿ ಕತ್ರಿನಾ ಕುಟುಂಬಸ್ಥರು ತಮ್ಮ ಆಪ್ತ ವಲಯದಲ್ಲಿಯೇ ಹುಡುಗನನ್ನು ಹುಡುಕುತ್ತಿದ್ದಾರಂತೆ. 35 ವರ್ಷದ ಕತ್ರಿನಾ ಈ ಹಿಂದೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಾನು 33ನೇ ವಯಸ್ಸಿಗೆ ತಾಯಿಯಾಗಲು ಇಷ್ಟಪಡುತ್ತೇನೆ ಅಂತಾ ಹೇಳಿದ್ದರು. ತನ್ನ ಸಮಕಾಲೀನ ನಟಿಯರಾದ ಸೋನಂ ಕಪೂರ್, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ಮದುವೆಯಾಗಿದ್ದು, ಕತ್ರಿನಾ ತಾನು ಸಾಂಸಾರಿಕ ಜೀವನಕ್ಕೆ ಕಾಲಿಡಲು ಇಚ್ಛಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.