ಮನೋರಂಜನೆ

ಮುದ್ದು ಮಗುವಿನೊಂದಿಗೆ ಯಶ್‌-ರಾಧಿಕಾ ಸುದ್ದಿಗೋಷ್ಠಿ; ಅಂಬಿ ಗಿಫ್ಟ್ ನೆನೆದು ಭಾವುಕರಾದ ದಂಪತಿ

Pinterest LinkedIn Tumblr


ಬೆಂಗಳೂರು: 2 ನೇ ವಿವಾಹ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಮುದ್ದಾದ ಹೆಣ್ಣು ಮಗುವಿನೊಂದಿಗೆ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ಪತ್ನಿ ರಾಧಿಕಾ ಪಂಡಿತ್‌ ಅವರು ಭಾನುವಾರ ಸುದ್ದಿಗೋಷ್ಠಿ ನಡೆಸಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ವಾರ್ಷಿಕೋತ್ಸವವನ್ನು ದಂಪತಿಗಳು ಸಂಭ್ರಮಿಸುತ್ತಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯಶ್‌ ಮಾಧ್ಯಮಗಳಿಗೆ, ಅಭಿಮಾನಿಗಳಿಗೆ ಧನ್ಯಾವದಗಳನ್ನು ತಿಳಿಸಿದರು. ನನಗೆ ಹೆಣ್ಣು ಮಗುವಾಗಬೇಕು ಎಂದು ತುಂಬಾ ಆಸೆ ಇತ್ತು. ದೇವರು ಆ ಆಸೆ ನೆರವೇರಿಸಿದ್ದಾನೆ ಎಂದರು.

ಅಂಬರೀಷ್‌ ಅವರು ಗಿಫ್ಟ್ ನೀಡಿರುವ ತೊಟ್ಟಿಲ ವಿಚಾರ ನೆನೆದು ಭಾವುಕರಾದರು. ಅವರು ನಮ್ಮೊಂದಿಗೆ ಸದಾ ಇರುತ್ತಾರೆ.ತೊಟ್ಟಿಲ ಬಗ್ಗೆ ಸುಮಲತಾ ಅಕ್ಕ ಅವರು ಫೋನ್‌ ಮಾಡಿ ಹೇಳಿದಾಗ ಎಮೋಷನಲ್‌ ಆದೆ ಎಂದರು.

ರಾಧಿಕಾ ಅವರು ಮಾತನಾಡಿ ಮಗು ಅವರ ಅಪ್ಪ ಯಶ್‌ ಹಾಗೆ ಇದೆ.ನಾನು ಗರ್ಭಿಣಿಯಾದಾಗಿನಿಂದ ಇಲ್ಲಿಯವರೆಗೂ ಯಾವುದೇ ತೊಂದರೆಯಾಗಿಲ್ಲ. ಮಗುವನ್ನು ಹೇಗೆ ನೋಡಿ ಕೊಳ್ಳಬೇಕೆಂದು ಅಮ್ಮ ಹೇಳಿಕೊಡುತ್ತಿದ್ದಾರೆ. ಜೀವನದಲ್ಲಿ ಹೊಸತೊಂದು ಅನುಭವವಾಗುತ್ತಿದೆ ಎಂದರು.

ಮಗುವಿನ ಹೆಸರು ಇನ್ನೂ ನಿರ್ಧರಿಸಿಲ್ಲ, ನಾಮಕರಣದ ದಿನ ತಿಳಿಸುತ್ತೇವೆ ಎಂದರು.

Comments are closed.