ಮನೋರಂಜನೆ

ಬಿಗ್ ಬಾಸ್ ನಲ್ಲಿ ಲೈಟ್ಸ್ ಆಫ್ ಆದ ನಂತರ ಅಕ್ಷತಾ ಕೈ ಹಿಡಿದು ರೌಂಡ್ ಸುತ್ತಿಸಿ ಡ್ಯಾನ್ಸ್ ಮಾಡಿದ ರಾಕೇಶ್: ಇದನ್ನೆಲ್ಲ ನನ್ನ ಪತಿ ನೋಡಿದರೆ ಎಂದ ಅಕ್ಷತಾ…

Pinterest LinkedIn Tumblr


ಬೆಂಗಳೂರು: ಬಿಗ್ ಬಾಸ್ ಸೀಸನ್-6ರಲ್ಲಿ ಸ್ಪರ್ಧಿ ಅಕ್ಷತಾ ತಮ್ಮ ಪತಿಯ ಬಗ್ಗೆ ಕಮೆಂಟ್ ಮಾಡಿ ಸುದ್ದಿಯಾಗಿದ್ದಾರೆ.

ಅಕ್ಷತಾ, ರಾಕೇಶ್ ಬಳಿ ತಮ್ಮ ಪತಿಯ ಬಗ್ಗೆ ಕಮೆಂಟ್ ಮಾಡಿದ್ದಾರೆ. ಲೈಟ್ಸ್ ಆಫ್ ಆದ ನಂತರ ಅಕ್ಷತಾ ಹಾಗೂ ರಾಕೇಶ್ ಮೇಕಪ್ ರೂಮಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರು ಡ್ಯಾನ್ಸ್ ಮಾಡಿದ್ದು, ನನ್ನ ಗಂಡ ಇದನ್ನೆಲ್ಲ ನೋಡಿದರೆ, ಪುಕ ಪುಕ ಪುಕ ಅಂತಿರುತ್ತೆ, ಎಲ್ಲಿ ನನ್ನನ್ನು ಬಿಟ್ಟು ಹೋಗಿಬಿಡ್ತಾಳೋ ಎಂಬ ಭಯ ಅವರಲ್ಲಿ ಕಾಡುತ್ತಿರುತ್ತೆ ಎಂದು ಅಕ್ಷತಾ ಹೇಳಿದ್ದಾರೆ.

ಮೇಕಪ್ ರೂಮಿನಲ್ಲಿದ್ದಾಗ ರಾಕೇಶ್, ನೀನು ಅಪರೂಪದ ಹುಡುಗಿ ಎಂದು ಅಕ್ಷತಾರನ್ನು ಹಾಡಿ ಹೊಗಳಿದ್ದಾರೆ. ನೀನು ಮೊದಲ ಬಾರಿಗೆ ಅಪರೂಪದ ಹುಡುಗಿ ಎಂದು ನನ್ನನ್ನು ಪಾಸಿಟಿವ್ ಆಗಿ ಹೊಗಳಿದ್ದೀಯಾ ಎಂದು ಹೇಳುವ ಮೂಲಕ ಗೆಳಯನಿಗೆ ಧನ್ಯವಾದ ಸಲ್ಲಿಸಿದ್ದಾರೆ. ಆಗ ರಾಕೇಶ್, ಅಕ್ಷತಾ ಅವರ ಕೈ ಹಿಡಿದು ರೌಂಡ್ ಸುತ್ತಿಸಿ ಡ್ಯಾನ್ಸ್ ಮಾಡಿಸಿದ್ದಾರೆ.

ಏನ್ ಆಯಿತ್ತೋ ಅಕ್ಷತಾ ಹಾಗೂ ರಾಕೇಶ್ ಅವರೇ, ನೀವು ಮಾತನಾಡುವುದಿಲ್ಲ ಎಂದು ಪ್ರಾಮೀಸ್ ಮಾಡಿದ್ದೀರಿ. 1 ವಾರದಲ್ಲಿ ಮಾತನಾಡದಷ್ಟು 1 ಗಂಟೆಯಲ್ಲಿ ಮಾತನಾಡಿದ್ದೀರಾ ಎಂದು ಸುದೀಪ್ ನಮಗೆ ಕೇಳುತ್ತಾರೆ ಎಂದು ರಾಕೇಶ್ ಹೇಳಿದರು. ಈ ವೇಳೆ ಅಕ್ಷತಾ ನನ್ನ ಗಂಡ ಇದನ್ನೆಲ್ಲ ನೋಡಿದರೆ, ಅವರಿಗೆ ಪುಕ ಪುಕ ಪುಕ ಅಂತಿರುತ್ತೆ, ಎಲ್ಲಿ ಬಿಟ್ಟು ಹೋಗಿಬಿಡ್ತಾಳೋ ಎಂದು ಹೇಳಿದ್ದಾರೆ. ಅಕ್ಷತಾ ಅವರ ಈ ಮಾತಿಗೆ ರಾಕೇಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಕ್ಷತಾ ತಮ್ಮ ಪತಿ ಪ್ರಸನ್ನ ಸಾಗರ್ ಬಗ್ಗೆ ಮಾತನಾಡಿದ್ದನ್ನು ಬಿಗ್ ಬಾಸ್ ಸಂಚಿಕೆಯಲ್ಲಿ ಪ್ರಸಾರ ಮಾಡಿಲ್ಲ. ಆದರೆ ಅಕ್ಷತಾ ಈ ರೀತಿ ಹೇಳಿರುವ ವಿಡಿಯೋವನ್ನು ವೂಟ್ ಆ್ಯಪ್‍ನಲ್ಲಿ ಬರುವ ಅನ್‍ಸೀನ್ ಕಥೆಗಳಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಅಕ್ಷತಾ 6 ವರ್ಷಗಳ ಹಿಂದೆ ರಂಗ ನಿರ್ದೇಶಕ ಪ್ರಸನ್ನ ಸಾಗರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

Comments are closed.