ಮನೋರಂಜನೆ

ನಟ ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ ! ಇಂದು ‘ಕೆಜಿಎಫ್’ ಚಿತ್ರದ ಮೊದಲ ಹಾಡು ಬಿಡುಗಡೆ !

Pinterest LinkedIn Tumblr

ಕೆಜಿಎಫ್ ಚಿತ್ರ ಬಿಡುಗಡೆಗೆ ಇನ್ನು 20 ದಿನಗಳಷ್ಟೇ ಬಾಕಿ ಇದ್ದು, ಕೆಜಿಎಫ್ ಚಿತ್ರಕ್ಕಾಗಿ ಎದುರು ನೋಡುತ್ತಿರುವವರ ಕುತೂಹಲ ಹೆಚ್ಚಾಗುತ್ತಿದೆ. ಚಿತ್ರಕ್ಕಾಗಿ ಎದುರುನೋಡುತ್ತಿರುವವರಿಗೆ ಮತ್ತೊಂದು ಅಪ್ ಡೇಟ್ ಇದ್ದು, ಡಿ.4 ರಂದು ಚಿತ್ರದ ಧ್ವನಿ ಸುರುಳಿಯ ಮೊದಲ ಹಾಡು ಬಿಡುಗಡೆಯಾಗಲಿದೆ.

ಕೆಜಿಎಫ್ ಚಿತ್ರದ ಮೊದಲ ಹಾಡು ನಾಳೆ(ಮಂಗಳವಾರ) ಸಂಜೆ ನಹರಿ ಯೂಟ್ಯೂಬ್ ಚಾನೆಲಿನಲ್ಲಿ 6.30ಕ್ಕೆ ಬಿಡುಗಡೆಯಾಗಲಿದೆ. ನಾಳೆ ಬಿಡುಗಡೆಯಾಗಲಿರುವ ‘ಸಲಾಂ ರಾಕಿ ಭಾಯ್’ ಹಾಡಿನತ್ತ ಎಲ್ಲರ ಚಿತ್ತ ನೆಟ್ಟಿದೆ.

ಕನ್ನಡ, ತಮಿಳು, ತೆಲುಗು ಹಾಗು ಮಲಯಾಳಂ ಸೇರಿದಂತೆ 4 ಭಾಷೆಗಳಲ್ಲಿಯೂ ಮೊದಲ ಹಾಡು ಬಿಡುಗಡೆಯಾಗಲಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ 3.6 ಕೋಟಿ ರೂಪಾಯಿಗಳಿಗೆ ಪಡೆದಿದೆ. ರವಿ ಬಸ್ರೂರ್ 3-4 ಹಾಡುಗಳನ್ನು ಸಂಯೋಜಿಸಿದ್ದು, ಯಾವ ಹಾಡು ಮೊದಲು ಬಿಡುಗಡೆಯಾಗಲಿದೆ ಎಂಬ ಕುತೂಹಲ ಹಾಗೆಯೇ ಮುಂದುವರೆದಿದೆ.

ಯಶ್ ಹಾಗೂ ತಮನ್ನಾ ಭಾಟಿಯಾ ನೃತ್ಯ ಇರುವುದು ಮ್ಯೂಸಿಕ್ ಆಲ್ಬಮ್ ನ ಮತ್ತೊಂದು ವಿಶೇಷತೆಯಾಗಿದ್ದು 1970 ರ ಪರೋಪಕಾರಿ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

Comments are closed.