ಮನೋರಂಜನೆ

ಬಿಗ್​ಬಾಸ್​ನಿಂದ ಹೊರ ಬಂದ ಕೆಲವೇ ದಿನದಲ್ಲಿ ಅಮೆರಿಕ ವರನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ನೇಹಾ ಆಚಾರ್ಯ!

Pinterest LinkedIn Tumblr

ಬೆಂಗಳೂರು: ಕಿಚ್ಚ ಸುದೀಪ್ ನಡೆಸಿ ಕೊಡುವ ಕನ್ನಡದ ಬಿಗ್ ಬಾಸ್ 6 ಆವೃತ್ತಿಯಿಂದ ಹೊರ ಬಂದ ಬೆನ್ನಲ್ಲೇ ನಟಿ ಸ್ನೇಹಾ ಆಚಾರ್ಯ ಅಮೆರಿಕ ಮೂಲದ ರಾಯನ್ ಕೊಪ್ಕೊ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸ್ನೇಹಾ ಎರಡು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ಇತ್ತೀಚೆಗಷ್ಟೇ ಹೊರಬಂದಿದ್ದರು. ಇನ್ನು ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳುವ ಮುಂಚೆಯೇ ಸ್ನೇಹ್ ರಾಯನ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕಳೆದ ನವೆಂಬರ್ 25ರಂದು ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರದ ಎಂ ಸಿರಿ ಕನ್ವೆನ್ಷನ್ ಹಾಲ್ ನಲ್ಲಿ ಹಿಂದು ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ಸ್ನೇಹಾ ಬೆಳ್ಳಿತರೆ ಹಾಗೂ ಕಿರುತೆರೆ ನಟಿ. ನಿರ್ದೇಶಕ ಶಿವಮಣಿ ನಿರ್ದೇಶನದ ಜೋಶ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಪಾದಾರ್ಪಣೆ ಮಾಡಿದ್ದರು. ನಂತರ ಹಲವು ಚಿತ್ರಗಳಲ್ಲಿ ನಾಯಕಿಯ ಗೆಳತಿ ಪಾತ್ರದಲ್ಲಿ ಸ್ನೇಹಾ ನಟಿಸಿದ್ದರು.

Comments are closed.