ಮನೋರಂಜನೆ

ಆಪರೇಷನ್ ಹೊರತು ಯಾವುದೇ ಚಿಕಿತ್ಸೆ ಇಲ್ಲ: ನಟಿ ರಮ್ಯಾ ಕಾಯಿಲೆ ಕುರಿತು ಮೂಳೆ ತಜ್ಞರ ಸ್ಪಷ್ಟನೆ

Pinterest LinkedIn Tumblr


ಮಂಡ್ಯ: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ (Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿಲ್ಲ.

ಈ ಕಾಯಿಲೆ ಬಗ್ಗೆ ಮೂಳೆ ತಜ್ಞ ಡಾ.ಜಗನ್ನಾಥ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆ ಪ್ರಮುಖವಾಗಿ ಮೂಳೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಇದನ್ನು ಮೂಳೆ ಕ್ಯಾನ್ಸರ್ ಎಂದು ಹೇಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದು ಅಪರೂಪದ ಕಾಯಿಲೆಯಾಗಿದ್ದು, ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಸಮಾನಾಗಿ ಕಾಣಿಸಿಕೊಳ್ಳುತ್ತದೆ. ಇದು 2-3 ಸಾವಿರ ಮಂದಿಯಲ್ಲಿ ಒಬ್ಬರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯನ್ನು ಮೂಳೆಯಲ್ಲಿ ಬದಲಾವಣೆ ಕಂಡುಬಂದ ನಂತರ ತಿಳಿಯಬಹುದಾಗದೆ. ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆ ಮೊದಲನೇ ಹಂತದಲ್ಲಿ ಇದ್ದಾಗಲೇ ಚಿಕಿತ್ಸೆ ಪಡೆಯಬೇಕು ಇಲ್ಲವಾದರೆ ಮೂಳೆಯನ್ನು ತಿನ್ನುತ್ತಾ ಹೋಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆ ಬಂದರೆ, ಮೂಳೆಗಳಲ್ಲಿ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ ಜಾಯಿಂಟ್‍ಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಬಂದರೆ ಓಡಾಡೋಕೆ ಆಗಲ್ಲ. ಅಲ್ಲದೇ ಕಾಯಿಲೆ ಕಾಣಿಸಿಕೊಂಡ ಜಾಗವನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಆ ಜಾಗದಲ್ಲಿ ತುಂಬಾ ನೋವಾಗುತ್ತದೆ. ಒಂದು ವೇಳೆ ಈ ಕಾಯಿಲೆ ಬಂದರೆ ಅದಕ್ಕೆ ಚಿಕಿತ್ಸೆ ಎಂದರೆ ಆಪರೇಷನ್ ಮಾತ್ರ. ಆಪರೇಷನ್ ಬಿಟ್ಟು ಬೇರೆ ಯಾವುದೇ ಚಿಕಿತ್ಸೆ ಇಲ್ಲ. ಆಪರೇಷನ್ ಮಾಡಿದ ತಕ್ಷಣ ಸಂಪೂರ್ಣ ಬೆಡ್ ರೆಸ್ಟ್ ಮಾಡಬೇಕು ಎಂದು ಡಾ.ಜಗನ್ನಾಥ್ ಹೇಳಿದ್ದಾರೆ.

ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದ್ದು, ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದೆ. ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್‍ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.

ದೇಹದಲ್ಲಿ ಸಮಸ್ಯೆಗಳಾದರೆ ವ್ಯತಾಸ ಕಂಡು ಬಂದರೆ ಡಾಕ್ಟರ್ ಸಂಪರ್ಕಿಸಿ. ನಿರ್ಲಕ್ಷ್ಯ ಮಾಡಿದರೆ ಸೂಕ್ತ ಬೆಲೆ ತೆರಬೇಕಾಗತ್ತದೆ. ನಿರ್ಲಕ್ಷ್ಯ ಮಾಡಿ ನಾನು ಈಗ ಪಾಠ ಕಲಿತಿದ್ದೇನೆ ಅಂತ ಕಾಲಿನ ಚಿತ್ರ ಹಾಕಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ನಟ ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದ ಮಾಜಿ ಸಂಸದೆ ರಮ್ಯಾ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ರಮ್ಯಾ ಅವರು ಅಂಬಿ ನೋಡಲು ಯಾಕೆ ಬರಲಿಲ್ಲ ಅನ್ನೋ ಅಸಲಿ ಕಾರಣ ಇದೀಗ ತಿಳಿದುಬಂದಿದೆ.

Comments are closed.