ಮನೋರಂಜನೆ

ಮೈಸೂರಿನ ಕಾಲೇಜಿನಲ್ಲಿ ನಟಿ ಆರತಿಯನ್ನ ಚುಡಾಯಿಸುತ್ತಿದ್ದ ಅಂಬರೀಷ್!

Pinterest LinkedIn Tumblr


ಒರಟು ನಡೆ, ಗಡುಸು ಮಾತು, ಯಾರ ಮಾತು ಕೇಳದ ರೆಬೆಲ್​ ಅಂಬಿಯ ಮನಸ್ಸು ಕಲ್ಮಶವಿಲ್ಲದ ಪ್ರೀತಿಯಿಂದ ತುಂಬಿತ್ತು. ಅದಕ್ಕೆ ಅವರನ್ನು ಕಂಡರೆ ಹೆದರುವವರೂ ಅಂಬಿಯನ್ನು ಇಷ್ಟಪಡುತ್ತಿದ್ದರು.

ಅಂಬಿ ಹಾಗೂ ಆರತಿ ಮೈಸೂರಿನಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರಂತೆ. ಆಗ ಒಬ್ಬರಿಗೊಬ್ಬರು ಪರಿಚಯವೇ ಇರಲಿಲ್ಲ. ಆಗಲೇ ತನ್ನ ಪೋಲಿ ಸ್ನೇಹಿತರೊಂದಿಗೆ ಸೇರಿ ಅಂಬಿ ಹುಡುಗಿಯರನ್ನು ಚುಡಾಯಿಸುತ್ತಿದ್ದರಂತೆ.

ಒಂದೇ ಕ್ಯಾಂಪಸ್​ನಲ್ಲಿ ಆಗಾಗ ಎದುರಾಗುತ್ತಿದ್ದ ಆರತಿ ಹಾಗೂ ಅಂಬಿಗೆ ಮುಖ ಪರಿಚಯವಿತ್ತಾದರೂ, ಆರತಿಗೆ ಅಂಬಿ ಕೇವಲ ಚುಡಾಯಿಸುವ ಉಡಾಳನಾಗಿ ನೆನಪಿನಲ್ಲಿದ್ದರು. ಪುಟ್ಟಣ್ಣ ಕಣಗಾಲರ ‘ನಾಗಹಾವು’ ಸಿನಿಮಾಗೆ ಅಂಬರೀಷ ಆಯ್ಕೆಯಾದಗಲೇ ಅಂಬಿ ಹುಡುಗಿಯರನ್ನು ಚುಡಾಯಿಸುತ್ತಿದ್ದ ವಿಷಯ ಗೊತ್ತಾಗಿದ್ದು.

ಈ ಕುರಿತಂತೆ ನಟಿ ಆರತಿ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣದ ಸೆಟ್​ನಲ್ಲಿ ಮೊದಲ ಬಾರಿಗೆ ಅಂಬಿಯನ್ನು ಎದುರು ಕಂಡ ಆರತಿ ಅವರ ಪ್ರತಿಕ್ರಿಯೆ ಇವನಾ… ಈ ಸಿನಿಮಾಗೆ ಆಯ್ಕೆಯಾಗಿರೋದು… ಕಾಲೇಜಿನಲ್ಲಿ ನನ್ನ ಚುಡಾಯಿಸುತ್ತಿದ್ದವ ಅಂತ ಹುಬ್ಬೇರಿಸಿದ್ದರಂತೆ.

ಕಾಕತಾಳೀಯವೆಂಬಂತೆ ಅವರ ಕಾಲೇಜು ಜೀವನದ ಈ ಘಟನೆ ಅಂಬಿ ಅಭಿನಯದ ‘ನಾಗರಹಾವು’ ಮೊದಲ ಸಿನಿಮಾದಲ್ಲೂ ಮರುಕಳಿಸಿತ್ತು. ಕಾಲೇಜಿಗೆ ಹೋಗುವಾಗ ಅಂಬಿ, ಆರತಿಯನ್ನು ಏನ್​ ಬುಲ್​ ಬುಲ್​ ಮಾತಾಡ್ಕಿಲ್ವಾ ಎಂದು ಚುಡಾಯಿಸುತ್ತಾರೆ. ಆದರೆ ಇಲ್ಲಿ ಬೈಕ್​ ಬದಲಾಗಿ ಸೈಕಲ್​ ಇರುತ್ತೆ ಅಷ್ಟೆ ಅದಕ್ಕೆ ಅನ್ನಿಸುತ್ತೆ ಅಷ್ಟು ಸುಲಭವಾಗಿ ಅವರು ‘ನಾಗರಹಾವು’ ಸಿನಿಮಾದ ಆ ದೃಶ್ಯದಲ್ಲಿ ಅಭಿನಯಿಸಿದ್ದು.

Comments are closed.