ಮನೋರಂಜನೆ

ರಜನಿಕಾಂತ್, ಚಿರಂಜೀವಿ ಸೇರಿ ಹಲವು ಗಣ್ಯರಿಂದ ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನ

Pinterest LinkedIn Tumblr

ಬೆಂಗಳೂರು: ನಿನ್ನೆ ವಿಧಿವಶರಾದ ಅಂಬರೀಷ್ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ರಾಜಕೀಯ, ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ದಕ್ಷಿಣ ಭಾರತದ ಸುಪ್ರಸಿದ್ದ ನಟ ಸೂಪರ್ ಸ್ಟಾರ್ ರಜನಿಕಾಂತ್ ,ಮೆಗಾಸ್ಟಾರ್ ಚಿರಂಜೀವಿ,ಅಂಬಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು,ಸುಮಲತಾಗೆ ಸಾಂತ್ವನ ಹೇಳಿದ್ದಾರೆ.ಅಂಬಿ ನೆನೆದು ಭಾವುಕರಾದ ರಜನಿಕಾಂತ್ , ದು:ಖ ತಡೆಯಲಾರದೆ ಕಣ್ಣೀರಿಟ್ಟಿರು. ಗದ್ಗದಿತರಾಗಿಯೇ ಸುಮಲತಾ ಅವರನ್ನು ರಜನಿಕಾಂತ್ ಸಂತೈಸಿದ್ದಾರೆ.

ಕಾಲಿವುಡ್ ನಟ ಶರತ್ ಕುಮಾರ್ ಕುಟುಂಬ ಸಮೇತ ಬಂದು ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ಕನ್ನಡದ ಖ್ಯಾತ ನಟರಾದ ವಿ. ರವಿಚಂದ್ರನ್, ಪುನೀತ್ ರಾಜ್ ಕುಮಾರ್ , ಚಿತ್ರ ಸಾಹಿತಿ ಹಂಸಖೇಲ ಸೇರಿದಂತೆ ಹಲವು ನಟರು ಅಂತಿಮ ದರ್ಶನ ಪಡೆದುಕೊಂಡರು.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ವೀರಪ್ಪಮೊಯ್ಲಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್, ಯಡಿಯೂರಪ್ಪ, ಸೇರಿದಂತೆ ಹಲವು ಮಂದಿ ರಾಜಕೀಯ ಗಣ್ಯರು ಅಂಬರೀಷ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು.

ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟುಮಾಡದಂತೆ ಸಾರ್ವಜನಿಕರು ವರ್ತಿಸುವಂತೆ ಇದೇ ವೇಳೆ ಪರಮೇಶ್ವರ್ ಮನವಿ ಮಾಡಿಕೊಂಡರು. ಅಂಬರೀಷ್ ಕಳೆದುಕೊಂಡು ನಾಡು ಬಡವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

Comments are closed.