ಮನೋರಂಜನೆ

ಬಾಹುಬಲಿಯನ್ನ ಹಿಂದಿಕ್ಕಿದ ಕೆಜಿಎಫ್ – ದಾಖಲೆ ಮೊತ್ತಕ್ಕೆ ಆಡಿಯೋ ರೈಟ್ಸ್ ಮಾರಾಟ!

Pinterest LinkedIn Tumblr


ಬೆಂಗಳೂರು: ಭಾರತೀಯ ಚಲನ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯಲು ಸಿದ್ಧವಾಗಿರುವ ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ 2015 ರಲ್ಲಿ ಬಿಡುಗಡೆಯಾಗಿದ್ದ ಬಾಹುಬಲಿ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ.

ಕೆಜಿಎಫ್ ಚಿತ್ರದ ಆಡಿಯೋ ರೈಟ್ಸ್ ಲಹರಿ ಸಂಸ್ಥೆ ಖರೀದಿ ಮಾಡಿದ್ದು, ಹಿಂದಿ ಭಾಷೆ ಬಿಟ್ಟು ಉಳಿದ 4 ಭಾಷೆಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಹಿಂದೆ ಬಾಹುಬಲಿ ಸಿನಿಮಾ ಆಡಿಯೋವನ್ನು 3 ಕೋಟಿ ರೂ.ಗೆ ಖರೀದಿ ಮಾಡಿದ್ದ ಲಹರಿ ಸಂಸ್ಥೆ ಕೆಜಿಎಫ್ ಚಿತ್ರದ ಆಡಿಯೋವನ್ನು 3.60 ಕೋಟಿ ರೂ.ಗೆ ಖರೀದಿ ಮಾಡಿದೆ. ಇದರೊಂದಿಗೆ ದಕ್ಷಿಣ ಭಾರತದ ಸಿನಿ ಇತಿಹಾಸದಲ್ಲಿ ಕೆಜಿಎಫ್ ಹೊಸ ದಾಖಲೆ ಬರೆದಿದೆ.

ಪಂಚಭಾಷೆಯಲ್ಲಿ ಕೆಜಿಎಫ್ ತೆರೆಗೆ ಬರುತ್ತಿದ್ದು, ಈಗಾಗಲೇ ಚಿತ್ರದ ಟ್ರೇಲರ್ ಮೂಲಕ ದೇಶಾದ್ಯಂತ ತನ್ನ ಹವಾ ಸೃಷ್ಟಿ ಮಾಡಿದೆ. ಚಿತ್ರೀಕರಣದ ಆರಂಭದಿಂದ ಒಂದಿಲ್ಲೊಂದು ವಿಷಯಕ್ಕೆ ಕೆಜಿಎಫ್ ಸದ್ದು ಮಾಡುತ್ತಾ ಬರುತ್ತಿದೆ. ಡಿಸೆಂಬರ್ 21ರಂದು ಚಿತ್ರ ತೆರೆಕಾಣಲಿದೆ. ಟ್ರೇಲರ್ ಹವಾ ಮೂಲಕವೇ ಸ್ಯಾಂಡಲ್‍ವುಡ್‍ಗೆ ಸೀಮಿತವಾಗಿದ್ದ ಕೆಜಿಎಫ್ ಬಾಲಿವುಡ್ ಅನ್ನೂ ಮೀರಿ ವಿಶ್ವ ಮಟ್ಟದಲ್ಲಿಯೂ ಹೆಸರು ಮಾಡಲಿದೆ ಎಂಬ ಮಾತುಗಳೂ ವ್ಯಾಪಕವಾಗಿಯೇ ಕೇಳಿ ಬಂದಿದೆ.

ಸದ್ಯ ಎಲ್ಲರ ಚಿತ್ತ ಕೆಜಿಎಫ್ ಚಿತ್ರದ ಮೇಲಿದ್ದು, ಭೂಗತ ಲೋಕದ ಕರಾಳ ಸತ್ಯವನ್ನು ಕೆಜಿಎಫ್ ತೋರಿಸಲಿದೆ ಎಂಬುವುದನ್ನು ಟ್ರೇಲರ್ ಸಾರಿ ಸಾರಿ ಹೇಳುತ್ತಿದೆ. ಓರ್ವ ಕಥಾನಾಯಕನ ಜೀವನದ ಏರುಪೇರುಗಳನ್ನು ತುಂಬಾ ಸ್ಪಷ್ಟವಾಗಿ ಪ್ರಶಾಂತ್ ನೀಲ್ ತೋರಿಸುವ ಪ್ರಯತ್ನ ಟ್ರೇಲರ್ ನಲ್ಲಿ ಕಾಣುತ್ತಿದೆ. ಇನ್ನು ಟೀಸರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ಟ್ರೇಲರ್ ನಲ್ಲಿ ನೋಡುಗರಲ್ಲಿ ರೋಮ ರೋಮಗಳಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿದೆ.

Comments are closed.