ಬೆಂಗಳೂರು: ಈ ಮೊದಲೇ ನಾನು ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದೆ. ಆದರೆ ವಕೀಲರ ಮುಂದೆ ಒಪ್ಪಂದ ಆಗಿದ್ದ ಕಾರಣ ನಾನು 2 ವರ್ಷ ಸುಮ್ಮನೆ ಇದ್ದೆ. ಶನಿ ಕಾಟ ಇದ್ರೂ ಪಾರಾಗ್ತಾರೆ, ಆದರೆ ಹೆಂಡತಿ ಕಾಟದಿಂದ ಪಾರಾಗಲು ಸಾಧ್ಯವೇ ಇಲ್ಲ ಎಂದು ನಟ ವಿಜಯ್ ಹೇಳಿದ್ದಾರೆ.
ಮೊದಲ ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಕುರಿತು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಅವರು, ನಾನು ಎಂದು ಶಾಂತಿ ಭಂಗ ಮಾಡಿಲ್ಲ. ಆಕೆಯೇ ನನಗೆ ಶಾಂತಿ ಇಲ್ಲದಂತೆ ಮಾಡಿದ್ದಾರೆ. ನಾನು ಏನು ತಪ್ಪು ಮಾಡಿಲ್ಲ. ಆದರೆ ಜನತೆಗೆ ಸುಳ್ಳು ಹೇಳಿಕೆ ನೀಡಿ ನನ್ನ ಹೆಸರು ಹಾಳು ಮಾಡಲು ಯತ್ನಿಸಿದ್ದು ನನಗೆ ಬೇಸರ ತಂದಿತ್ತು ಎಂದು ಹೇಳಿದರು.
2 ವರ್ಷಗಳ ಕಾಲ ಎಷ್ಟೇ ನೋವು ನೀಡಿದರೂ ಸಹನೆಯಿಂದ ಇದ್ದೆ. ಆದರೆ ಈಗ ಎಲ್ಲದಕ್ಕೂ ಕೊನೆಗಾಣಿಸಬೇಕೆಂದು ವಿಡಿಯೋ ನೀಡಿ ಪೂರ್ಣ ವಿರಾಮ ಹಾಕಿದ್ದೇನೆ. ನನ್ನ ಮೇಲೆ ಇಲ್ಲ ಸಲ್ಲದ ನಕಲಿ ಎಫ್‍ಐಆರ್ ಮಾಡಿದ್ದರು. ಅದರೂ ಸುಮ್ಮನೆ ಇದ್ದೆ. ಇದನ್ನು ಸಹಿಸಲು ಸಾಧ್ಯವಾಗದೇ ಆಕೆ ಮತ್ತೆ ಇಷ್ಟೆಲ್ಲಾ ಮಾಡಿದ್ದಾರೆ. ನನ್ನ ತಾಯಿಯ ಮೇಲೂ 2 ಬಾರಿ ಹಲ್ಲೆ ನಡೆದಿತ್ತು, ಆದರೆ ನಾನು ಗೌರವಕ್ಕೆ ಅಂಜಿ ಮಾತನಾಡಿರಲಿಲ್ಲ ಎಂದು ತಿಳಿಸಿದರು.
ನನ್ನ ಅರ್ಥ ಬದುಕನ್ನೆ ಆಕೆ ಮುಗಿಸಲು ಯತ್ನ ಮಾಡಿದ್ದಾಳೆ, ಇಷ್ಟು ಕಷ್ಟ ಅನುಭವಿಸಿದಕ್ಕೆ ಕೀರ್ತಿ ನನಗೆ ಸಿಕ್ಕಿದ್ದು ಅದೃಷ್ಟ. ದೇವರು ನನಗೆ ಕೀರ್ತಿಯನ್ನು ನೀಡಿದ್ದಾರೆ. ಆದರೆ ನನಗೆ ಈಗಲೂ ನೋವು ಇದೆ. ನನ್ನ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾರೆ. ನನ್ನ ವಿರುದ್ಧವೇ ಮಕ್ಕಳು ದೂರು ನೀಡುದಂತೆ ಮಾಡಿದ್ದಾರೆ ಬೇಸರ ವ್ಯಕ್ತಪಡಿಸಿದರು.
ನಾನು ಜನರಿಗೆ ಸ್ಪಷ್ಟನೆ ನೀಡಬೇಕಿದೆ. ನನ್ನ ಮಕ್ಕಳ ಭವಿಷ್ಯ ನೋಡಿ ಸುಮ್ಮನೆ ಕುಳಿತ್ತಿದ್ದೆ. ಆದರೆ ಇನ್ನು ಏನು ಮಾಡಲು ಸಾಧ್ಯವಿಲ್ಲ. ಮಾಧ್ಯಮಗಳ ಮುಂದೇ ನನ್ನ ವಿರುದ್ಧ ಹೇಳಿಕೆ ನೀಡಿ ಅವಮಾನ ಮಾಡಿದ್ದರು. ಈಗ ನನಗೆ ಸತ್ಯ ತಿಳಿದಿದೆ. ಜನರಿಗೂ ಆಕೆಯ ವ್ಯಕ್ತಿತ್ವ ತಿಳಿದಿದೆ ಅಷ್ಟು ಸಾಕು. ಇನ್ನಾದರು ಆಕೆಗೆ ಒಳ್ಳೆಯದು ಮಾಡಲಿ, ಆದರೆ ನಾನು ಕಾನೂನು ಹೋರಾಟ ಮಾತ್ರ ಮುಂದುವರಿಸುತ್ತೇನೆ ಎಂದು ತಿಳಿಸಿದರು.
Comments are closed.