ಮುಂಬೈ: ಲೈಂಗಿಕ ಕಿರುಕುಳದ ಅರ್ಥವೇನು? ಒಂದು ಸಿನಿಮಾದ ಚಿತ್ರೀಕರಣದ ವೇಳೆ 50ರಿಂದ 100 ಮಂದಿ ಸೆಟ್ ನಲ್ಲಿ ಇರುತ್ತಾರೆ..ಹೀಗೆ ಆರೋಪ ಮಾಡುವ ಮುನ್ನ ಆಲೋಚಿಸಬೇಕು…ಇದು ಬಾಲಿವುಡ್ ನಟ ನಾನಾ ಪಾಟೇಕರ್ ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದ ನಟಿ ತನುಶ್ರೀಗೆ ನೀಡಿದ ತಿರುಗೇಟು.
ತನುಶ್ರೀ ದತ್ತ ಆರೋಪದ ಕುರಿತಂತೆ ಮೊದಲ ಬಾರಿಗೆ ಟೈಮ್ಸ್ ನೌಗೆ ನಾನಾ ಪಾಟೇಕರ್ ಪ್ರತಿಕ್ರಿಯೆ ನೀಡಿದ್ದು, ನನ್ನ ಮೇಲಿನ ಆರೋಪಕ್ಕೆ ಕಾನೂನು ಪ್ರಕಾರ ಏನು ಮಾಡಲು ಸಾಧ್ಯ ಎಂದು ಪರಿಶೀಲಿಸುತ್ತೇನೆ. ಈ ಬಗ್ಗೆ ನಾನು ನಿಮ್ಮ(ಮಾಧ್ಯಮದ) ಜೊತೆ ಮಾತನಾಡುವುದು ಸಮಯ ವ್ಯರ್ಥ ಮಾಡಿದಂತೆ. ನೀವು ಏನು ಬೇಕಾದರು ಮಾಧ್ಯಮದಲ್ಲಿ ಪ್ರಕಟಿಸಿ ಎಂದು ಅಸಮಾಧಾನದಿಂದ ಹೇಳಿದ್ದರು.
2008ರಲ್ಲಿ ಹಾರ್ನ್ ಓಕೆ ಪ್ಲೀಸ್ ಸಿನಿಮಾ ಚಿತ್ರೀಕರಣದ ವೇಳೆ ನಟ ನಾನಾ ಪಾಟೇಕರ್ ಸೆಟ್ ನಲ್ಲಿ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಯುವತಿಯರು, ನಟಿಯರ ಜೊತೆ ನಾನಾ ಯಾವ ರೀತಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂಬುದು ಬಾಲಿವುಡ್ ಗೆ ಚೆನ್ನಾಗಿ ಗೊತ್ತು. ಆದರೆ ಈವರೆಗೂ ಇದನ್ನು ಪ್ರಕಟಿಸಲು ಮಾಧ್ಯಮದವರು ಧೈರ್ಯ ತೋರಿಸಿಲ್ಲ ಎಂದು ತನುಶ್ರೀ ದತ್ತಾ ಆರೋಪಿಸಿದ್ದಳು.
ನನಗೆ ಯಾವ ನೋಟಿಸ್ ಬಂದಿಲ್ಲ; ತನುಶ್ರೀ
ನಾನಾ ಪಾಟೇಕರ್ ಅವರಿಂದ ನಾನು ಯಾವ ನೋಟಿಸ್ ಅನ್ನು ಪಡೆದಿಲ್ಲ ಎಂದು ನಟಿ ತನುಶ್ರೀ ದತ್ತಾ ಶನಿವಾರ ಎಎನ್ ಐ ನ್ಯೂಸ್ ಏಜೆನ್ಸಿ ಜೊತೆ ಮಾತನಾಡುತ್ತ ತಿಳಿಸಿದ್ದು, ಒಂದು ವೇಳೆ ನಾನಾ ಪಾಟೇಕರ್ ಕಾನೂನು ಸಮರಕ್ಕಿಳಿದರೆ ತಾನೂ ಕೂಡಾ ಕಾನೂನು ಸಮರಕ್ಕೆ ಸಿದ್ದ. ಅದಕ್ಕಾಗಿ ತನ್ನ ವಕೀಲರ ಜೊತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
Comments are closed.