ಮನೋರಂಜನೆ

ಅಮ್ಮನಿಗಾಗಿ ಅನುರಾಧ ಗಾಯನ

Pinterest LinkedIn Tumblr


ಚೌಕ ಚಿತ್ರದ ‘ಅಪ್ಪ ಐ ಲವ್ ಯೂ..’ ಎಂಬ ಹಾಡನ್ನು ನೀವೆಲ್ಲ ಕನ್ನಡದ ಖ್ಯಾತ ಗಾಯಕಿ ಅನುರಾಧ ಭಟ್ ಕಂಠ ಸಿರಿಯಲ್ಲಿ ಮೂಡಿ ಬಂದ ಈ ಹಾಡು ಸೂಪರ್ ಹಿಟ್ ಆಗಿತ್ತು. ಇದೀಗ ಅನುರಾಧ, ಅಮ್ಮನ ಬಗ್ಗೆ ಹಾಡಿರುವ ಹೊಸ ಹಾಡು ಬಿಡುಗಡೆ ಯಾಗಿದೆ.

ಹೌದು, ಇತ್ತೀಚೆಗೆ ಬಿಡುಗಡೆಯಾಗಿರುವ ‘ಅಸತೋಮ ಸದ್ಗಮಯ‘ ಚಿತ್ರದ ಧ್ವನಿಸುರುಳಿಯಲ್ಲಿ ಅಮ್ಮನಿಗೋಸ್ಕರ ಒಂದು ಹಾಡನ್ನ ಹಾಡಿದ್ದಾರೆ. ‘ನಾ ತೆರೆದೆ ತುಂಬಾ ಹಳೆಯ ಪುಟವ…’ ಎನ್ನುವ ಈ ಹಾಡಿಗೆ ಅನುರಾಧ ಧ್ವನಿಯಾಗಿದ್ದು, ಇದೀಗ ಈ ಹಾಡಿಗೆ ಸೋಷಿಯಲ್ ಮೀಡಿ ಯಾಗಳಲ್ಲಿ ಕೇಳುಗರು ಅಮ್ಮನ ಪ್ರೀತಿಗೋಸ್ಕರ ಹಪಾಹಪಿಸುತ್ತಿರುವರಿಗಾಗಿ ಈ ಹಾಡನ್ನು ಅರ್ಪಿಸ ಲಾಗಿದೆ, ಜೊತೆಗೆ ಅಮ್ಮನ ಪ್ರೀತಿ ಎಷ್ಟು ದೊಡ್ಡದು ಎಂಬುದನ್ನ ಈ ಹಾಡಿನಲ್ಲಿ ವರ್ಣಿಸಲಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಾಜೇಶ್ ವೇಣೂರು.

‘ಅಸತೋಮ ಸದ್ಗಮಯ’ ಚಿತ್ರಕ್ಕೆ ವಹಾಬ್ ಸಲೀಂ ಸಾಹಿತ್ಯ ಮತ್ತು ಸಂಗೀತವನ್ನು ನೀಡಿದ್ದಾರೆ. ‘ನಿರ್ದೇಶಕರು ಈ ಹಾಡಿನ ಸಂದ ರ್ಭದ ಬಗ್ಗೆ ವಿವರಿಸಿ, ಅಮ್ಮನ ಬಗ್ಗೆ ಒಂದು ಇಮೋಶನಲ್ ಹಾಡು ಬೇಕೆಂದಾಗ ನನಗೂ ತುಂಬಾ ಸಂತೋಷವಾಯಿತು. ಏಕೆಂದರೆ ಇದಕ್ಕೆ ಹೊಂದುವಂತಹ ಒಂದು ಅದ್ಬುತವಾದ ನನ್ನ ಮನಸ್ಸಿನಲ್ಲಿತ್ತು ಮತ್ತದು ನನ್ನ ಫೇವರೀಟ್ ಟ್ಯೂನ್ ಕೂಡ ಆಗಿತ್ತು. ನಿರ್ದೇಶಕರಿಗೆ ಈ ಟ್ಯೂನ್ ಕೇಳಿಸಿದಾಗ ತುಂಬಾ ಇಷ್ಟಪಟ್ಟು ಒಂದೇ ಸಲಕ್ಕೆ ಓಕೆ ಮಾಡಿದರು’ ಎನ್ನುತ್ತಾರೆ ಸಂಗೀತ ನಿರ್ದೇಶಕ ವಹಾಬ್ ಸಲೀಂ.

ಈ ಟ್ಯೂನ್‌ನಂತೆಯೇ ಹಾಡು ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ, ಈ ಹಾಡಿನ ಬಗ್ಗೆ ಸಂಗೀತ ಪ್ರೇಮಿಗಳಿಂದ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಎನ್ನುತ್ತಾರೆ ಸಲೀಂ. ‘ಅಸತೋಮ ಸದ್ಗಮಯ’ ಚಿತ್ರದಲ್ಲಿ ರಾಧಿಕಾ ಚೇತನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮೂವೀಸ್ ಲಾಂಛನದಡಿಯಲ್ಲಿ ಅಶ್ವಿನ್ ಜೊಸ್ಸಿ ಪಿರೇರಾ ಈ ಚಿತ್ರವನ್ನು ನಿರ್ಮಿಸಿದ್ದು, ರಾಜೇಶ್ ವೇಣೂರ್ ಚಿತ್ರಕ್ಕೆ ಆ್ಯಕ್ಷನ್ -ಕಟ್ ಹೇಳಿದ್ದಾರೆ.

Comments are closed.