ಮನೋರಂಜನೆ

ಮಲಯಾಳಿ ಬೆಡಗಿಯ ಕನ್ನಡ ಪ್ರೀತಿ

Pinterest LinkedIn Tumblr


ಇಂದು ಕನ್ನಡದ ಬಹುತೇಕ ನಟಿಮಣಿಯರು, ಕನ್ನಡತಿಯರಾಗಿಯೂ ಇಂಗ್ಲೀಷ್ ವ್ಯಾಮೋಹಕ್ಕೆ ಮೊರೆ ಹೋಗಿದ್ದಾರೆ. ಕನ್ನಡ ಗೊತ್ತಿದ್ದರೂ, ನಮಗೆ ಭಾಷೆಯ ಜ್ಞಾನವೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಆದರೆ ಬಂದ ಹಲವರು ಕನ್ನಡವನ್ನು ಕಲಿತು, ಅದನ್ನೇ ರೂಢಿಸಿಕೊಂಡು ಮುಂದೆ ಸಾಗುತ್ತಿದ್ದಾರೆ. ಅವರಲ್ಲಿ ಮಲಯಾಳಂ ಬೆಡಗಿ ನೀತು ಬಾಲ ಕೂಡ ಒಬ್ಬರು.

ನೀತು ಮೂಲತಃ ಕೇರಳದ ಕಲ್ಲಿಕೋಟೆಯ ಹುಡುಗಿ. ಬಹುತೇಕ ಶಿಕ್ಷಣವೂ ಅಲ್ಲಿಯೇ. ಇಂಜಿನಿಯರಿಂಗ್ ವ್ಯಾಸಾಂಗಕ್ಕೆ ಬೆಂಗಳೂರಿಗೆ ಬಂದಾಕೆ ಇಲ್ಲಿಯೇ ನೆಲೆಸಿದಳು. ತಾನಂದುಕೊಂಡಂತೆ ಸಿವಿಲ್ ಇಂಜಿನಿಯ ರಿಂಗ್ ಪದವಿಯನ್ನು ಪೂರೈಸಿದಳು. ಅಲ್ಲಿಂದ, ಮಾಡೆಲಿಂಗ್ ಕ್ಷೇತ್ರದತ್ತ ವಾಲಿದಳು. ಸಿಲಿಕಾನ್ ಸಿಟಿ ಯನ್ನು ಬಹುವಾಗಿ ಮೆಚ್ಚುತ್ತಿದ್ದ ನೀತುಗೆ ಕನ್ನಡ, ಕಲಿಯಬೇಕೆಂಬ ಹೆಬ್ಬಯಕೆಯಾಯಿತು. ಅಂತೂ ತಮ್ಮ ಸಹಪಾಠಿಗಳ ಕನ್ನಡವನ್ನು ಕಲಿತಳು.

ಇಂದು ಇದೇ ನೀತು, ನಮ್ಮ ನಿಮ್ಮಂತೆಯೇ ಸ್ಪಷ್ಟವಾಗಿ, ಅಚ್ಚುಕಟ್ಟಾಗಿ ಕನ್ನಡ ಮಾತನಾಡುತ್ತಾರೆ. ರೂಪದರ್ಶಿಯಾಗಿದ್ದ ಈಕೆಗೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಬಯಕೆಯೂ ಇತ್ತು. ಅದೇ ಸಂದರ್ಭದಲ್ಲಿ ‘ಮೇಘನಾ ಅಲಿಯಾಸ್ ಮ್ಯಾಗಿ’ ಎಂಬ ಚಿತ್ರ ಸೆಟ್ಟೇರಿತ್ತು. ಈ ಚಿತ್ರಕ್ಕೆ ನೀತು, ನಾಯಕಿ ಯಾಗಿಯೂ ಆಯ್ಕೆಯಾದಳು. ಆಕೆಯ ಕನ್ನಡ ಪ್ರೇಮವೇ ಈ ಚಿತ್ರದಲ್ಲಿ ನಟಿಸುವ ಅವಕಾಶ ಒದಗಿಸಿಕೊಟ್ಟಿತ್ತು. ಅಲ್ಲಿಂದ ನೀತುಗೆ ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶ ಒದಗಿ ಬಂದವು.

ಸದ್ಯ ಹೆಸರಿಡದ, ಹೊಸ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಚಿತ್ರ ಗಳಲ್ಲಿ ಬ್ಯುಸಿಯಾಗಿರುವ ನೀತುಗೆ ಮಲ ಯಾಳಂ ಚಿತ್ರಗಳಲ್ಲೂ ನಟಿಸುವ ಅವಕಾಶ ಗಳು ಬರುತ್ತಿವೆ. ಆದರೆ ನನ್ನ ಮೊದಲ ಆಯ್ಕೆ ಕನ್ನಡಕ್ಕೆ ಎನ್ನುತ್ತಾರೆ. ಈಕೆಯ ನಟನೆಯ ಅಭಿರುಚಿಗೆ ಪ್ರೋತ್ಸಾಹಿಸುವ ಸಲುವಾಗಿ ನೀತುವಿನ ಅಪ್ಪ-ಅಮ್ಮ ಕೂಡ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ.

Comments are closed.