ಮನೋರಂಜನೆ

ಸಖತ್ ವೈರಲ್ ಆದ “ಭಾಗಿ-2′ ಚಿತ್ರದ “ಏಕ್ ದೋ ತೀನ್’ ಹಾಡು

Pinterest LinkedIn Tumblr


“ಭಾಗಿ’ ಚಿತ್ರದ ಮುಂದುವರೆದ ಭಾಗವಾದ “ಭಾಗಿ-2′ ಚಿತ್ರದ ಆ್ಯಕ್ಷನ್ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿ ಮಾಡುತ್ತಿರುವುದು ಒಂದು ಕಡೆಯಾದರೆ, ಚಿತ್ರದ “ಏಕ್ ದೋ ತೀನ್’ ಐಟಮ್ ಸಾಂಗ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿ, ಯೂಟ್ಯೂಬ್ ಟ್ರೆಂಡಿಂಗ್’ನಲ್ಲಿದೆ.

ಈ ಸ್ಪೆಷಲ್ ಹಾಡಿನಲ್ಲಿ ಮಾದಕ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದು, ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಇನ್ನು ಚಿತ್ರದ ಹಾಡಿನ ಟೀಸರ್ ಮಾತ್ರ ರಿಲೀಸ್ ಆಗಿದ್ದು, ಬಿಡುಗಡೆಯಾದ 1 ದಿನದಲ್ಲೇ 46 ಲಕ್ಷಕ್ಕೂ ಅಧಿಕ ಜನ ಹಾಡಿಗೆ ಮನ ಸೋತಿದ್ದಾರೆ.

ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಅಭಿನಯಿಸಿದ್ದು, ‘ಭಾಗಿ’ ಚಿತ್ರವನ್ನ ನಿರ್ದೇಶನ ಮಾಡಿದ್ದ ಸಜೀದ್ ‘ಭಾಗಿ-2’ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದು, ಇದೇ ಮಾರ್ಚ್ 30 ರಂದು ಚಿತ್ರ ತೆರೆಕಾಣುತ್ತಿದೆ.

-ಉದಯವಾಣಿ

Comments are closed.