ಮನೋರಂಜನೆ

ರಜನಿಯ 2.0 ಟೀಸರ್‌ ಲೀಕ್‌! ವೈರಲ್‌ ಆಗುತ್ತಿರುವ ವಿಡಿಯೋ

Pinterest LinkedIn Tumblr


ಮುಂಬಯಿ: ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್‌, ಆಕ್ಷಯ್‌ಕುಮಾರ್‌ ಅಭಿನಯಿಸಿರುವ ಬಹು ನಿರೀಕ್ಷಿತ 2.0 ಚಿತ್ರದ ಟೀಸರ್‌ ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ವೈರಲ್‌ ಆಗುತ್ತಿದೆ.

ಭಾರತೀಯ ಚಿತ್ರರಂಗದ ಟ್ರ್ಯಾಕರ್‌ ಆಗಿರುವ ರಮೇಶ್‌ ಬಾಲಾ ಅವರು ಟ್ವೀಟ್‌ ಮಾಡಿ ಈ ವಿಚಾರ ಖಚಿತ ಪಡಿಸಿದ್ದು ,ಚಿತ್ರತಂಡದಿಂದ ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ ಸೋರಿಕೆಯಾಗಿದ್ದು ಕೃತ್ಯ ಎಸಗಿದವರ ವಿರುದ್ಧ ಚಿತ್ರ ತಂಡ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.

ಭಾನುವಾರ ಬೆಳಗ್ಗೆ ಟ್ವೀಟರ್‌ನಲ್ಲಿ ಟೀಸರ್‌ ಕಾಣಿಸಿಕೊಂಡಿದ್ದು ವೈರಲ್‌ ಆಗುತ್ತಲಿದೆ.

2.0 ಚಿತ್ರ 2010 ರ ಬ್ಲ್ಯಾಕ್‌ ಬಸ್ಟರ್‌ ಎಂಥಿರನ್‌ (ರೊಬೋಟ್‌) ಚಿತ್ರದ ಮುಂದುವರಿದ ಭಾಗವಾಗಿದ್ದು, ಶಂಕರ್‌ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಜನಿ, ಆಕ್ಷಯ್‌ ಜೊತೆಗೆ ಅಮಿ ಜ್ಯಾಕ್ಸನ್‌ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

-ಉದಯವಾಣಿ

Comments are closed.