ಬೆಂಗಳೂರು: ಕಣ್ ಹೊಡೆದು ಹುಡುಗರ ಹಾರ್ಟಿಗೆ ಬುಲೆಟ್ ಹಾರಿಸಿರೋ ಮಲೆಯಾಳಂ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಚಂದನವನಕ್ಕೆ ಎಂಟ್ರಿ ಕೊಡಲಿದ್ದಾರೆ.
ಒರು ಆದಾರ್ ಲವ್ ಸಿನಿಮಾದ ಕೆಲ ದೃಶ್ಯ ತುಣುಕುಗಳ ಮೂಲಕ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಹಾಗೂ ನ್ಯಾಷನಲ್ ಸ್ಟಾರ್ ಆಗಿರುವ ಸುಂದರಿ ಪ್ರಿಯಾರನ್ನ ಅಪ್ರೋಚ್ ಮಾಡಿರುವ ನಿರ್ದೇಶಕ ಯೋಗಿ, ಯೋಗಿ ಲವ್ಸ್ ಸುಪ್ರಿಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಈ ಸಿನಿಮಾ ಕುರಿತಾಗಿ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಶೀಘ್ರದಲ್ಲೇ ಚಿತ್ರಕ್ಕೆ ಪ್ರಿಯಾ ಸಹಿ ಹಾಕಲಿರುವ ಸಾಧ್ಯತೆ ಇದೆ. ಇದು ರೊಮ್ಯಾಂಟಿಕ್ ಚಿತ್ರವಾಗಿದ್ದು, ಮುಂದಿನ ತಿಂಗಳು ಸೆಟ್ಟೇರಲಿದೆ ಎನ್ನಲಾಗಿದೆ.
ಕಣ್ ಚೆಲುವೆ ಪ್ರಿಯಾ ವಾರಿಯರ್ಗೆ ಈಗಾಗಲೇ ಸಾಲು ಸಾಲು ಅವಕಾಶಗಳು ಬರುತ್ತಿವೆ. ಆ ಸಾಲಿನಲ್ಲೀಗ ಸ್ಯಾಂಡಲ್ವುಡ್ ಕೂಡ ಸೇರಿದೆ. ಈ ಮೂಲಕ ಪ್ರಿಯಾ ಕನ್ನಡ ಯುವಕರಿಗೆ ಕಣ್ ಹೊಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
Comments are closed.