ಮನೋರಂಜನೆ

ಮೊದಲ ಬಾರಿಗೆ ರಾತ್ರಿ ಶೂಟಿಂಗ್ ನಲ್ಲಿ ನಟ ಅಂಬರೀಶ್

Pinterest LinkedIn Tumblr


ನಟ ಅಂಬರೀಶ್ ಸದ್ಯ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ. ಬಹಳ ವರ್ಷಗಳ ನಂತರ ಮತ್ತೆ ಪೂರ್ಣ ಪ್ರಮಾಣದ ನಾಯಕನಾಗಿ ಅಂಬರೀಶ್ ಕಮ್ ಬ್ಯಾಕ್ ಮಾಡಿದ್ದಾರೆ. ಅದರ ಜೊತೆಗೆ ತಮ್ಮ ಈ ಸಿನಿಮಾದ ಬಗ್ಗೆ ಅಂಬರೀಶ್ ವಿಶೇಷ ಕಾಳಜಿ ಹೊಂದಿದ್ದಾರೆ.

ತಮಿಳಿನ ‘ಪವರ್ ಪಾಂಡಿ’ ಸಿನಿಮಾದ ರಿಮೇಕ್ ಚಿತ್ರವಾದ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಚಿತ್ರೀಕರಣ ಈಗಾಗಲೇ ನಡೆದಿದೆ. ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇನ್ನು ನಟ ಅಂಬರೀಶ್ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಬಗ್ಗೆ ಮತ್ತು ಅವರ ಪಾತ್ರದ ಬಗ್ಗೆ ತುಂಬ ಉತ್ಸಾಹ ಹೊಂದಿದ್ದಾರೆ. ಚಿತ್ರೀಕರಣದ ವೇಳೆ ಅವರ ಜೋಶ್ ನೋಡಿ ಇಡೀ ಚಿತ್ರತಂಡ ಬೆರಗಾಗಿದೆಯಂತೆ. ಜೊತೆಗೆ ಈ ಸಿನಿಮಾದಲ್ಲಿ ಈ ಹಿಂದೆ ಎಂದು ಮಾಡದ ಒಂದು ಕೆಲಸವನ್ನು ಅಂಬಿ ಮಾಡಿದ್ದಾರೆ.

ಅಂಬರೀಶ್ ಅವರ ಇಷ್ಟು ವರ್ಷದ ಕೆರಿಯರ್ ನಲ್ಲಿ ಎಂದು ಕೂಡ ರಾತ್ರಿ ಶೂಟಿಂಗ್ ಮಾಡಿರಲಿಲ್ಲವಂತೆ. ಆದರೆ ಇದೇ ಮೊದಲ ಬಾರಿಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ರಾತ್ರಿ ಶೂಟಿಂಗ್ ನಲ್ಲಿ ಅವರು ಭಾಗಿಯಾಗಿದ್ದಾರೆ.

ಕೆಲದಿನಗಳ ಹಿಂದೆ ಚಿತ್ರದ ಚಿತ್ರೀಕರಣ ನಾಗರಬಾವಿ ಹತ್ತಿರ ನಡೆದಿದೆ. ಬೆಳ್ಳಗೆ 12 ಗಂಟೆಗೆ ಶುರುವಾದ ಶೂಟಿಂಗ್ ರಾತ್ರಿ 2 ಗಂಟೆವರೆಗೆ ಸಾಗಿದೆ. ಅಂಬರೀಶ್ ಮೊದಲ ಬಾರಿಗೆ ತಡ ರಾತ್ರಿಯ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

Comments are closed.