ಮನೋರಂಜನೆ

ಈ ಖ್ಯಾತ ನಟಿಯ ಬಿಕಿನಿ ಫೋಟೋಗೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಕೊಟ್ಟ ಉತ್ತರವೇನು…?

Pinterest LinkedIn Tumblr

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಇತ್ತೀಚೆಗೆ ಒಂದಿಲ್ಲೊಂದು ಕಾರಣಕ್ಕಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಅದರಲ್ಲೂ ಟಾಲಿವುಡ್‌ ಸ್ಟಾರ್‌ ನಾಗಚೈತನ್ಯ ಜತೆ ಸಪ್ತಪದಿ ತುಳಿದ ಮೇಲೆ ಸಮಂತಾ ಕುರಿತು ಜನರಲ್ಲಿ ಸಿಕ್ಕಾಪಟ್ಟೆ ಕುತೂಹಲ ಇದೆ.

ಸದ್ಯಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಟ್‌ ಬಿಕಿನಿ ಫೋಟೋವೊಂದನ್ನು ಅಪ್ಲೋಡ್‌ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಸಮುದ್ರದ ಕಿನಾರೆಯಲ್ಲಿ ಬಿಕಿನಿ ತೊಟ್ಟು ಮಲಗಿದ ಅಕ್ಕಿನೇನಿ ನಾಗಾರ್ಜುನ್‌ ಸೊಸೆಯನ್ನು ಕೆಲವರು ಕೊಂಡಾಡಿದರೆ ಇನ್ನು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಂತಾ ಅವರ ಬಿಕಿನಿ ಫೋಟೋಗೆ ಸಾಕಷ್ಟು ನೆಗೆಟಿವ್‌ ಕಮೆಂಟ್‌ಗಳೂ ಬಂದಿವೆ. ಈ ಸಂಬಂಧ ಟ್ರೋಲ್‌ಗಳಿಗೂ ಗುರಿಯಾಗಿದ್ದಾರೆ ಮುದ್ದು ನಟಿ.

ಇನ್ನು ಕೆಲವರು ಸಮಂತಾ ಪರ ಬ್ಯಾಟಿಂಗ್‌ ಮಾಡಿದ್ದು ‘ ಅವರ ಪತಿ ನಾಗಚೈತನ್ಯಗೆ ಇಲ್ಲದ ಸಮಸ್ಯೆ ನಿಮಗೇಕೆ?’ ಎಂದು ತಮ್ಮ ನೆಚ್ಚಿನ ನಟಿಗೆ ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ತಮ್ಮ ವಿರುದ್ಧದ ಟ್ರೋಲ್‌ಗಳಿಗೆ ಸರಿಯಾದ ಉತ್ತರವನ್ನೇ ನೀಡಿದ್ದಾರೆ ಸಮಂತಾ. ‘ನನ್ನ ನಿಯಮಗಳನ್ನು ನಾನೇ ಬರೆದುಕೊಳ್ಳುತ್ತೇನೆ, ನೀವೂ ನಿಮ್ಮ ನಿಯಮಗಳನ್ನು ಬರೆದುಕೊಳ್ಳಿ’ ಎಂಬ ಅರ್ಥದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ.

ಸದ್ಯಕ್ಕೆ ಸಮಂತಾ ಅಭಿನಯದ ‘ರಂಗಸ್ಥಲಂ’ ಚಿತ್ರ ತೆರೆಗೆ ಬರಬೇಕಿದೆ. ಈ ಚಿತ್ರದಲ್ಲಿ ಸಮಂತಾಗೆ ನಾಯಕನಾಗಿ ರಾಮ್‌ ಚರಣ್‌ ಅಭಿನಯಿಸಿದ್ದಾರೆ. ಚಿತ್ರದ ಟೀಸರ್‌ ಟಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

Comments are closed.