ರಾಷ್ಟ್ರೀಯ

ವ್ಯಾಪಾರಿಗಳಿಂದ ಗೋಮಾಂಸ ಮಾರಾಟ ಬಂದ್

Pinterest LinkedIn Tumblr


ಪಣಜಿ: ಬೆಳಗಾವಿಯಿಂದ ಗೋಮಾಂಸ ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ಗೋ ರಕ್ಷಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೋವಾ ಗೋಮಾಂಸ ವ್ಯಾಪಾರಿಗಳು ರಾಜ್ಯಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ರಾಜ್ಯ ಸರಕಾರ ಗೋ ರಕ್ಷಕರು ನೀಡುತ್ತಿರುವ ಕಿರುಕುಳ ತಡೆಗಟ್ಟುವ ಭರವಸೆ ನೀಡುವವರೆಗೂ ನಾವು ಗೋಮಾಂಸವನ್ನು ಆಮದು ಮಾಡಿಕೊಳ್ಳುವುದಿಲ್ಲ’ ಎಂದು ಖುರಾಶಿ ಮೀಟ್ ಟ್ರೇಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಮನ್ನಾ ಬೆಪಾರಿ ತಿಳಿಸಿದ್ದಾರೆ.

‘ಸರಕಾರ ನಡೆಸುತ್ತಿರುವ ರಾಜ್ಯದ ಏಕೈಕ ಕಸಾಯಿಖಾನೆಯಾಗಿರುವ ‘ಗೋವಾ ಮೀಟ್‌ ಕಾಂಪ್ಲೆಕ್ಸ್‌’ ಕಳೆದ ಮೂರು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಆದಷ್ಟು ಬೇಗ ಇದನ್ನು ಮತ್ತೆ ತೆರೆಯುವಂತೆ’ ಬೆಪಾರಿ ಒತ್ತಾಯಿಸಿದ್ದಾರೆ.

ಸ್ಟಾಕ್ ಇರುವ ಮಾಂಸ ಮಾರಾಟ ಮಾಡಲು ಶನಿವಾರ ಬೆಳಗ್ಗೆ ಕೆಲವು ಅಂಗಡಿಗಳು ತೆರೆಯಲಿದ್ದು, ನಂತರ ಅವರೂ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮಾಂಸದ ವ್ಯಾಪಾರಿಗಳು ತಿಳಿಸಿದ್ದಾರೆ.

‘ಗೋಮಾಂಸ ಮಾರಾಟಗಾರರು ನೀಡಿದ ಮಾಹಿತಿಯಂತೆ ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು 2300-2400 ಕೆ.ಜಿ ಗೋಮಾಂಸಕ್ಕೆ ಬೇಡಿಕೆ ಇದೆ. ಅದರಲ್ಲಿ 2000 ಕೆ.ಜಿ ಮಾಂಸವನ್ನು ಗೋವಾ ಮೀಟ್‌ ಕಾಂಪ್ಲೆಕ್ಸ್‌ ಲಿಮಿಟೆಡ್‌ ವಿತರಿಸುತ್ತಿದ್ದು, ಹೆಚ್ಚುವರಿ ಮಾಂಸವನ್ನು ಕರ್ನಾಟಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

Comments are closed.