ಮನೋರಂಜನೆ

ಸುದೀಪ್ ಅಭಿಮಾನಿಗೆ ನಟಿ ಹರ್ಷಿಕಾ ಪೂಣಚ್ಚ ನೀಡಿರುವ ಖಡಕ್ ಉತ್ತರ ನೋಡಿ…

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚ, ಕಿಚ್ಚ ಸುದೀಪ್ ಅಭಿಮಾನಿಗಳ ಮೇಲೆ ತಿರುಗಿ ಬಿದ್ದಿದ್ದಾರೆ. ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಿಂದಿ ಚಿತ್ರದ ಹಾಡೊಂದಕ್ಕೆ ಡಬ್ ಸ್ಮ್ಯಾಶ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದ ಹರ್ಷಿಕಾ ವೀಡಿಯೋಗೆ ಕಮೆಂಟ್ ಮಾಡಿದ್ದ ವ್ಯಕ್ತಿ ಇವರನ್ನು ವ್ಯಥಾ ಕೆಣಕಿದ್ದಾರೆ.

“ಸಿನಿಮಾದಲ್ಲಿ ಅವಕಾಶ ಸಿಕ್ತಿಲ್ಲ ಅಂತ ಡಬ್ ಸ್ಮ್ಯಾಶ್ ಮಾಡಿದ್ಯಾ” ಎಂದ ಮಲ್ಲಿಕಾರ್ಜುನ ಎನ್ನುವ ವ್ಯಕ್ತಿಯ ಚೇಷ್ಟೆ ಪ್ರಶ್ನೆಗೆ ಹರ್ಷಿಕಾ ಖಡಕ್ ಉತ್ತರ ನೀಡೀದ್ದಾರೆ.

“ನನ್ನ ಮನಸ್ಸಿಗೆ ನೋವಾದರೆ ನೇರವಾಗಿ ಮಾತನಾಡುವುದನ್ನು ನಾನು ಕಿಚ್ಚ ಸುದೀಪ್ ರಿಂದ ಕಲಿತೆ, ಅಂತಹಾ ನಟನ ಅಭಿಮಾನಿಯಾಗಿ ಹೀಗೆ ಮಾತನಾಡಲು ನಾಚಿಕೆ ಆಗಲ್ವಾ?…….ನೀನು ಕೆಲಸವಿಲ್ಲದೆ ಕುಳಿತಿರಬಹುದು, ನಾನಲ್ಲ ನಾನು ಮೂರು ದೊಡ್ಡ ಸಿನಿಮಾಗಳನ್ನ ಮಾಡುತ್ತಿದ್ದೇನೆ’ ಎಂದು ರೀ ಟ್ವೀಟ್ಮಾಡಿದ ನಟಿ ಸುದೀಪ್ ಅಭಿಮಾನಿಗೆ ಖಾರವಾಗಿ ಹೇಳಿದ್ದಾರೆ

ಸದ್ಯಕ್ಕೆ ಮಲಯಾಳಂನ `ಚಾರ್ ಮಿನರ್’ ಚಿತ್ರದಲ್ಲಿ ನಟಿಸುತ್ತಿರುವ ಹರ್ಷಿಕಾ ಕನ್ನಡದಲ್ಲಿ `ಚಿಟ್ಟೆ’, ‘ಅಧಿತಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Comments are closed.