ಮನೋರಂಜನೆ

ಬಿಗ್‌ಬಾಸ್‌ ಮನೆಯಲ್ಲಿ ನಿವೇದಿತಾಗೆ ಸಿಕ್ಕಿತು ಕಳಪೆ ಬೋರ್ಡ್ !

Pinterest LinkedIn Tumblr

ಈ ವಾರ ಮನೆಯ ಸದಸ್ಯರಿಗೆ ನೀಡಲಾಗಿದ್ದ ‘ಬಿಗ್‌ಬಾಸ್‌ನಗರ’ದ ಟಾಸ್ಕ್‌ ಶುಕ್ರವಾರ ಮುಕ್ತಾಯಗೊಂಡಿತು. ಬೆಸ್ಟ್ ಪರ್ಫಾರ್ಮರ್ ಜಯ ಶ್ರೀನಿವಾಸನ್ ಅವರಿಗೆ ಸಿಕ್ಕಿದರೆ, ಕಳಪೆ ಬೋರ್ಡ್ ನಿವೇದಿತಾ ಗೌಡಗೆ ಸಿಕ್ಕಿತು.

ನಿನ್ನೆ ಜೆಕೆ, ಅನುಪಮಾ, ನಿವೇದಿತಾ, ಚಂದನ್‌, ಆಶಿತಾ, ದಿವಾಕರ್‌ಹಾಗೂ ಶೃತಿ ಅವರಿಗೆ ಸೀಕ್ರೆಟ್‌ಟಾಸ್ಕ್‌ನೀಡಲಾಗಿತ್ತು. ಇವರನ್ನು ಕನ್ಫೆಶನ್‌ರೂಮಿಗೆ ಕರೆಯಿಸಿಕೊಂಡಿದ್ದ ಬಿಗ್‌ಬಾಸ್‌, ಒಂದೊಂದು ಟಾಸ್ಕ್‌ನೀಡಿದ್ರು. ಜತೆಗೆ ತಮಗೆ ನೀಡಲಾದ ಟಾಸ್ಕ್‌ಕುರಿತು ಯಾರ ಮುಂದೆಯೂ ಹೇಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ದಿವಾಕರ್ ಅವರನ್ನು ಹೊರತು ಪಡಿಸಿ ಉಳಿದವರಿಗೆ ನೀಡಿದ ಟಾಸ್ಕ್ ಏನು ಎಂಬುದು ಕಾಗದದ ಮೂಲಕ ತಿಳಿಸಿದ ಬಿಗ್‌ಬಾಸ್ ಅದನ್ನು ಗೌಪ್ಯವಾಗಿಟ್ಟಿದ್ದರು. ಆದರೆ, ದಿವಾಕರ್‌ಗೆ ಮನೆಯ ಸದಸ್ಯರ ಹಣವನ್ನು ಕಳ್ಳತನ ಮಾಡುವ ಸೀಕ್ರೆಟ್ ಟಾಸ್ಕ್‌ನೀಡಿದ್ರು. ಯಾರಿಗೂ ತಿಳಿಯದ ಹಾಗೆ ಹಣ ಕಳ್ಳತನ ಮಾಡಬೇಕು. ಒಂದು ವೇಳೆ ಸಿಕ್ಕಿಹಾಕಿಕೊಂಡ್ರೆ ಸ್ವಜಾಣ್ಮೆಯಿಂದ ಬಿಡಿಸಿಕೊಳ್ಳಬೇಕು ಎನ್ನುವುದು ಟಾಸ್ಕ್‌ನ ನಿಯಮವಾಗಿತ್ತು.

ಬಿಗ್‌ಬಾಸ್‌ಟಾಸ್ಕ್‌ನಂತೆ ಮೊದಲಿಗೆ ಅನುಪಮಾ ಅವರ ದುಡ್ಡು ಎಗರಿಸಿದ್ರು ದಿವಾಕರ್‌. ಅದನ್ನು ಬಾತ್‌‌ರೂಮ್‌ನಲ್ಲಿ ಬಚ್ಚಿಟ್ರು. ಇತ್ತ ಹಣ ಕಳೆದುಕೊಂಡು ಅನುಪಮಾ, ಅಧಿಕಾರಿಗಳಾದ ಕೃಷಿ ಹಾಗೂ ರಿಯಾಜ್ ಅವರಿಗೆ ದೂರು ನೀಡಿದ್ರು. ಇದರ ತನಿಖೆ ನಡೆಯುತ್ತಿರುವಾಗಲೇ ಮತ್ತೆ ಹಣ ಕದಿಯಲು ಮುಂದಾಗಿದ್ದ ದಿವಾಕರ್‌, ನಿವೇದಿತಾ ಹಾಗೂ ಆಶಿತಾ ಅವರ ಕೈಯಲ್ಲಿ ಸಿಕ್ಕಾಕಿಕೊಂಡ್ರು. ದಿವಾಕರ್ ಅವರನ್ನು ವಶಕ್ಕೆ ಪಡೆದ ರಿಯಾಜ್ ಹಾಗೂ ಕೃಷಿ ಆತನನ್ನು ಬಂಧಿಸಿದ್ರು.

ಈ ಸೀಕ್ರೆಟ್‌ಟಾಸ್ಕ್ ತುಂಬಾ ಮಜವಾಗಿತ್ತು. ಈ ಟಾಸ್ಕ್‌ಗಳು ಏನೆಂಬುದನ್ನು ಟಾಸ್ಕ್‌ನ ಕೊನೆಯಲ್ಲಿ ಎಲ್ಲರೆದುರು ಹೇಳಲಾಯಿತು. ಈ ಸೀಕ್ರೆಟ್‌ಟಾಸ್ಕ್‌ನಲ್ಲಿ ಚಂದನ್ ಅವರು ಯಶಸ್ವಿಯಾಗಿದ್ದರು.

Comments are closed.