ಮನೋರಂಜನೆ

ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಕುಟುಂಬದ ಸದಸ್ಯರ ಜತೆ ಭೇಟಿ ನೀಡಿದ ನಟಿ ಕಾಜೋಲ್‌

Pinterest LinkedIn Tumblr

ಹುಬ್ಬಳ್ಳಿ: ಬಾಲಿವುಡ್‌ನ ಖ್ಯಾತ ನಟಿ ಕಾಜೋಲ್‌ ತಮ್ಮ ಕುಟುಂಬದ ಸದಸ್ಯರ ಜತೆ ನಗರದ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರು.

ನಟಿ ಕಾಜೋಲ್, ತಾಯಿ ತನುಜ ಮುಖರ್ಜಿ, ತಂಗಿ ತನಿಷಾ, ಮಗ ಯೋಗಿ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಪೂಜೆ ನಡೆಸಿ ಸಿದ್ಧಾರೂಢ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದರು. ಕಜೋಲ್ ಹಾಗೂ ಅವರ ಕುಟುಂಬ ಗದ್ದುಗೆಗೆ ವಿಶೇಷ ಅಭಿಷೇಕ ಮಾಡಿಸಿದ್ರು.

ಸಿದ್ಧಾರೂಢ ಮಠದ ದರ್ಶನಕ್ಕಾಗಿ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಕಾಜೋಲ್ ಹಾಗೂ ಅವರ ಕುಟುಂಬ ಸದ್ಯಸರು ಅಲ್ಲೇ ಸಿದ್ಧಾರೂಢ ಸ್ವಾಮಿಗಳ ಗದ್ದುಗೆ ಬಳಿ ಧ್ಯಾನ ಮಾಡಿದ್ರು. ಕಾಜೋಲ್ ಬ್ಯಾಲದಿಂದಲೂ ಸಿದ್ಧಾರೂಢರ ಭಕ್ತರಾಗಿದ್ದಾರೆ.

Comments are closed.